ದಾವಣಗೆರೆ: ಬಸಾಪುರ ಹಿರಿಯ ಪ್ರಾಥಮಿಕ ಶಾಲೆಯ ಚೈತ್ರ, ನೀಲಾಂಬರಿ ರಾಜ್ಯ ಮಟ್ಟದ ರಸ ಪ್ರಶ್ನೆ ಸ್ಫರ್ಧೆಗೆ ಆಯ್ಕೆಯಾಗಿದ್ದಾರೆ.
ಶಾಲಾ ಮಕ್ಕಳಲ್ಲಿ ದೇಶದ ಬಗ್ಗೆ ಅರಿವು ಮೂಡಿಸಲು ಭಾರತದ ಸ್ವತಂತ್ರದ 75 ವರ್ಷಗಳ ಸಂಭ್ರಮಾಚರಣೆಯ “ಆಜಾದಿ ಕಾ ಅಮೃತ ಮಹೋತ್ಸವ” ಕಾರ್ಯಕ್ರಮದಡಿಯಲ್ಲಿ ತಾಲೂಕು, ಜಿಲ್ಲಾ ವಿಭಾಗ ಹಾಗೂ ರಾಜ್ಯಮಟ್ಟದಲ್ಲಿ ಆನ್ಲೈನ್ ಮೂಲಕ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿತ್ತು. ದಾವಣಗೆರೆ ಉತ್ತರ ವಲಯದ ತಾಲೂಕು ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬಸಾಪುರ(ವಾರ್ಡ್ 21) ಶಾಲೆಯ ವಿದ್ಯಾರ್ಥಿಗಳಾದ ಚೈತ್ರ, ಭಾಗ್ಯಲಕ್ಷ್ಮಿ ಹಾಗೂ ನೀಲಾಂಬರಿ ಆಯ್ಕೆಯಾಗಿದ್ದರು.
ಜಿಲ್ಲಾ ಮಟ್ಟದ ಆನ್ಲೈನ್ ರಸಪ್ರಶ್ನೆ ಸ್ಪರ್ಧೆಯಲ್ಲಿ ಶಾಲೆಯ ಚೈತ್ರ, ನೀಲಾಂಬರಿ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತ ವಿದ್ಯಾರ್ಥಿಗಳಿಗೆ ಶಾಲೆಯ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು , ಎಸ್ ಡಿ ಎಂಸಿ ಸಮಿತಿ, ಗ್ರಾಮದ ಮುಖಂಡರು ಅಭಿನಂದಿಸಿದ್ದಾರೆ.