ದಾವಣಗೆರೆ: ಹೊನ್ನಾಳಿ ತಾಲ್ಲೂಕಿನ ಕುಂದೂರು ಹಾಗೂ ಸುರಹೊನ್ನೆ ಗ್ರಾಮಗಳಲ್ಲಿ ಅ. 16 ರಂದು ಸಿಎಂ ಹಾಗೂ ಕಂದಾಯ ಸಚಿವರು ಗ್ರಾಮವಾಸ್ತವ್ಯ ಮಾಡಲಿದ್ದು, ಈ ಕಾರ್ಯಕ್ರಮದಲ್ಲಿ ಅವಳಿ ತಾಲ್ಲೂಕಿನ 20 ಕುಟುಂಬಗಳಿಗೆ ತಲಾ 1.50 ಲಕ್ಷ ಪರಿಹಾರ ವಿತರಿಸಲಾಗುವುದು.
ಕೋವಿಡ್ ಸೋಂಕಿನಿಂದಾಗಿ ಮೃತಪಟ್ಟವರಿಗೆ ರಾಜ್ಯ ಸರ್ಕಾರದಿಂದ 01 ಲಕ್ಷ ಮತ್ತು ಕೇಂದ್ರ ದಿಂದ 50 ಸಾವಿರ ಸೇರಿದಂತೆ 1.5 ಲಕ್ಷ ರೂ. ಪರಿಹಾರವನ್ನು ಮೃತ ಕುಟುಂಬಗಳಿಗೆ ನೀಡುವ ಯೋಜನೆ ಜಾರಿಗೆ ಬಂದಿದ್ದು, ಕುಂದೂರು ಗ್ರಾಮದಲ್ಲಿ 05 ಹಾಗೂ ಸುರಹೊನ್ನೆ ಗ್ರಾಮದಲ್ಲಿ 15 ಜನ ಕೋವಿಡ್‍ನಿಂದ ಮೃತಪಟ್ಟಿರುವ ಬಗ್ಗೆ ಮಾಹಿತಿ ಇದೆ. ಹೀಗಾಗಿ ಈ ಎಲ್ಲ 20 ಕುಟುಂಬಗಳಿಗೂ ಸರ್ಕಾರದ ಪರಿಹಾರ ಮೊತ್ತವನ್ನು ಮುಖ್ಯಮಂತ್ರಿಗಳಿಂದಲೇ ವಿತರಣೆ ಆಗುವ ರೀತಿ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.



