ದಾವಣಗೆರೆ: ವಂಚನೆ ಒಳಗಾಗುವವರು ಎಲ್ಲಿವರೆಗೆ ಇರುತ್ತಾರೋ ಅಲ್ಲಿವರೆಗೂ ವಂಚಕರು ಇದ್ದೆ ಇರುತ್ತಾರೆ. ಅದರಲ್ಲೂ ಆಫರ್ ಬಂದಿದೆ, ಬಹುಮಾನ ಬಂದಿದೆ ಎಂಬ ಮೆಸೇಜ್ ನಂಬಿದ್ದರೆ ಮುಗಿತು, ಮೂರು ನಾಮ ಬಿತ್ತು ಅಂತಾನೇ… ಈ ಬಗ್ಗೆ ಪೊಲೀಸ್ ಇಲಾಖೆ ಎಷ್ಟೇ ಜಾಗೃತಿ ಮೂಡಿಸಿದರು ಸಾವರ್ಜನಿಕರು ಎಚ್ಚರಗೊಳ್ಳುತ್ತಿಲ್ಲ, ಆನ್ ಲೈನ್ ವಂಚಕರನ್ನು ನಂಬಿ ದುಡ್ಡು ಕಳೆದುಕೊಳ್ಳತ್ತಲೇ ಇರುತ್ತಾರೆ. ಇಂತಹದೇ ಒಂದು ಘಟನೆ ದಾವಣಗೆರೆಯಲ್ಲಿ ನಡೆದಿದೆ. ಈ ವ್ಯಕ್ತಿಯೊಬ್ಬರಿಗೆ ಬಂದ ಸಂದೇಶ ನಂಬಿ ಬರೋಬ್ಬರಿ 25 ಸಾವಿರ ರೂಪಾಯಿ ಕಳೆದುಕೊಂಡಿದ್ದಾನೆ.
ಮೆಶೋ ಶಾಪಿಂಗ್ ಲಿಮಿಟೆಡ್ನಿಂದ ಬಹುಮಾನದ ಹಣ ಬಂದಿದೆ ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ 25 ಸಾವಿರ ವಂಚಿಸಲಾಗಿದೆ. ದೇವರಾಜ ಅರಸ್ ಬಡಾವಣೆಯ ವಿನಾಯಕ ನಗರದ ನಿವಾಸಿ ಸಿದ್ದೇಶಪ್ಪ ವೈ.ಎಸ್. ವಂಚನೆಗೆ ಒಳಗಾದವರು. ಅವರಿಗೆ ಮೆಶೋ ಶಾಪಿಂಗ್ ಲಿಮಿಟೆಡ್ನಿಂದ 8.80 ಲಕ್ಷ ಬಹುಮಾನದ ಹಣ ಬಂದಿದೆ ಎಂದು ಅಂಚೆ ಬಂದಿತ್ತು.
ಬಹುಮಾನ ಬೇಕಾದ್ರೆ ಲೆಟರ್ನಲ್ಲಿರುವ ಮೊಬೈಲ್ ನಂಬರ್ಗೆ ಕರೆ ಮಾಡುವಂತೆ ತಿಳಿಸಲಾಗಿತ್ತು. ಅದನ್ನು ನಂಬಿ ಸಿದ್ದೇಶಪ್ಪ ಕರೆ ಮಾಡಿದಾಗ ಹಿಂದಿಯಲ್ಲಿ ಮಾತನಾಡಿದ ವ್ಯಕ್ತಿ ಬಹುಮಾನದ ಹಣ ಬೇಕಾದರೆ ಜಿಎಸ್ಟಿ ಕಟ್ಟಬೇಕು ಎಂದಿದ್ದಾರೆ. ಇದನ್ನು ನಂಬಿದ ಸಿದ್ದೇಶಪ್ಪ ಹಂತ ಹಂತವಾಗಿ 25,000 ರೂಪಾಯಿಯನ್ನು ಅವರ ಖಾತೆಗೆ ಹಾಕಿದ್ದಾನೆ. ಹಣ ಬರದಿದ್ದಾಗ ಕರೆ ಮಾಡಿದ್ದಾಗ ಕರೆ ಸ್ವೀಕರಿಸಿಲ್ಲ. ಆಗ ವಂಚನೆಗೆ ಒಳಗಾಗಿದ್ದು ಗೊತ್ತಾಗಿದೆ.ಈ ಬಗ್ಗೆ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.