ದಾವಣಗೆರೆ: ಸೈಬರ್ ವಂಚನೆ (ಆನ್ ಲೈನ್ ವಂಚನೆ) ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದಾವಣಗೆರೆ ಜಿಲ್ಲೆಯಲ್ಲಿ ಪ್ರತ್ಯೇಕ ಎರಡು ಪ್ರಕರಣದಲ್ಲಿ ಪ್ರಾಧ್ಯಾಪಕಿ ಮತ್ತು ಶಿಕ್ಷಕಯೊಬ್ಬರು ವಂಚನೆಗೆ ಒಳಗಾಗಿದ್ದಾರೆ. ಈ ಎರಡು ಪ್ರಕರಣದಿಂದ ಒಟ್ಟು 6.45 ಲಕ್ಷ ವಂಚನೆ ನಡೆದಿದೆ.
ಪ್ರಕರಣ 1; ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಅವರ ಖಾತೆಯಿಂದ ಹಣ ವರ್ಗಾವಣೆಯಾಗಿದೆ. ಕೊಂಡಜ್ಜಿ ಗ್ರಾಮದ ಸಿದ್ದಲಿಂಗಮ್ಮ ಹಣ ಕಳೆದುಕೊಂಡ ಪ್ರಾಧ್ಯಾಪಕಿಯಾಗಿದ್ದಾರೆ. ಅವರ ಬ್ಯಾಂಕ್ ಖಾತೆಯಿಂದ ಅಕ್ಟೋಬರ್, ಡಿಸೆಂಬರ್ ತಿಂಗಳಲ್ಲಿ 5,000, 35,000, 95,000 ದಂತೆ ಹಂತಹಂತವಾಗಿ ಒಟ್ಟು 3.80 ಲಕ್ಷ ಹಣ ತೆಗೆದುಕೊಳ್ಳಲಾಗಿದೆ ಎಂದು ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣ 2; ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಷೇರು ಖರೀದಿಸಿದರೆ ಲಾಭ ಗಳಿಸಬಹುದು ಎಂಬ ವಂಚಕರ ಮಾತು ನಂಬಿ ನಂಬಿಸಿ ಶಾಲಾ ಶಿಕ್ಷಕರೊಬ್ಬರು 2.65 ಲಕ್ಷ ಕಳೆದುಕೊಂಡಿದ್ದಾರೆ. ದಾವಣಗೆರೆ ತಾಲ್ಲೂಕಿನ ಹಾಲುವರ್ತಿ ಗ್ರಾಮದ ಬಿ.ಪಿ. ರೂಪಾ ಹಣ ಕಳೆದುಕೊಂಡವರಾಗಿದ್ದಾರೆ. ದಿನೇಶ್ ಎಂಬುವವರು ಷೇರು ಖರೀದಿಸಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ನಂಬಿಸಿ 2.65 ಲಕ್ಷ ವಂಚಿಸಿದ್ದಾರೆ ಎಂದು ರೂಪಾ ಅವರು ದೂರು ನೀಡಿದ್ದಾರೆ. ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.