ದಾವಣಗೆರೆ: ಆನ್‌ಲೈನ್ ಟ್ರೇಡಿಂಗ್ ಮಾರ್ಕೆಂಟಿಂಗ್ ಮಾಡಿ ಪ್ರತಿ ತಿಂಗಳು ಲಾಭಾಂಶ ಗಳಿಸಬಹುದು ಎಂದು ಆಮಿಷವೊಡ್ಡಿದ ಎಂಜಿನಿಯರ್ ಯುವತಿಗೆ 4.58 ಲಕ್ಷ ವಂಚಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ನೌಕರಿ ಕೊಡಿಸುವುದಾಗಿ ಅಪರಿಚಿತ ವ್ಯಕ್ತಿಯೊಬ್ಬ 4.73 ಲಕ್ಷ ವಂಚಿಸಿದ್ದಾನೆ.
ಹೊನ್ನಾಳಿಯ ಗೌಡರ ಬೀದಿಯ ಮಂಜುಶ್ರೀ ಅವರಿಗೆ ಪಿಬಿಕೆ ಸಾಫ್ಟ್‌ವೇರ್ ಐಟಿ ಸಲ್ಯುಷನ್ ಕಂಪೆನಿಯವರು ಎಂದು ಅಪರಿಚಿತ, ಆನ್‌ಲೈನ್ ಟ್ರೇಡಿಂಗ್ ಮಾರ್ಕೆಂಟಿಂಗ್ ಮಾಡಿಪ್ರತಿ ತಿಂಗಳು ಲಾಭಾಂಶ ಗಳಿಸಬಹುದು ಎಂದು ಆಮಿಷವೊಡ್ಡಿ ವಿವಿಧ ಹಂತಗಳಲ್ಲಿ 1.50 ಲಕ್ಷ ಹಾಕಿಸಿಕೊಂಡು 41,000 ವನ್ನು ವಾಪಸ್ ಮಂಜುಶ್ರೀ ಅವರ ಖಾತೆಗೆ ಹಾಕಿದ್ದಾರೆ.ಆ ಬಳಿಕ ವಿವಿಧ ಹಂತಗಳಲ್ಲಿ 3.46 ಲಕ್ಷವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ಇನ್ನುತ್ತೊಂದು ಪ್ರಕರಣದಲ್ಲಿ ಸರಸ್ವತಿ ಬಡಾವಣೆಯ ಶರತ್ ಕುಮಾರ್ ಅವರಿಗೆ ಮ್ಯಾರಿಯೋಟ್ ಬಾನ್‌ವಾಯ್ ಕಂಪನಿಯ ನೌಕರನೆಂದು ಅನಾಮಧೇಯ ವ್ಯಕ್ತಿ ವಾಟ್ಸಾಪ್ ನಂಬರ್‌ಗೆ ಮೆಸೇಜ್ ಕಳುಹಿಸಿ ನೌಕರಿ ಕೊಡಿಸುವ ಆಮಿಷ ಒಡ್ಡಿದ್ದಾನೆ. ಕಂಪನಿಗೆ ರಿಜಿಸ್ಟ್ರೇಷನ್ ಬುಕ್ಕಿಂಗ್ ಮಾಡಿಕೊಟ್ಟರೆ ನಿಮಗೆ ಹಣ ನೀಡುತ್ತೇವೆ ಎಂದು ನಂಬಿಸಿದ್ದಾನೆ.ಇದನ್ನು ನಂಬಿದ ಶರತ್‌ಕುಮಾರ್ ಹಂತಹಂತವಾಗಿ 43,854 ರೂ. ಅನಾಮಧೇಯ ವ್ಯಕ್ತಿತ ಖಾತೆಗೆ ಹಾಕಿದ್ದಾರೆ. ಆಗ ವಾಪಸ್ 70,225 ರೂ.ಅನ್ನು ಶರತ್‌ಕುಮಾರ್ ಖಾತೆಗೆ ಹಾಕಿದ್ದಾರೆ. ಮತ್ತೆ ರಿಜಿಸ್ಟ್ರೇಷನ್‌ಗಾಗಿ ಹಣ ಬೇಕು ಎಂದು ಅಪರಿಚಿತರು ವಿವಿಧ ಹಂತಗಳಲ್ಲಿ 4.73 ಲಕ್ಷವನ್ನು ಹಾಕಿಸಿಕೊಂಡಿದ್ದಾರೆ. ಹಣ ಬೇಕಾದರೆ 11 ಲಕ್ಷ ಕಟ್ಟಬೇಕು ಎಂದು ಬೇಡಿಕೆ ಇಟ್ಟಾಗ ವಂಚನೆಯ ಜಾಲ ಬಯಲಾಗಿದೆ.ಈ ಎರಡು ಪ್ರಕರಣಗಳು ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.



