ದಾವಣಗೆರೆ: ಆನ್ ಲೈನ್ ವಂಚಕರ ಮಾತು ನಂಬಿ ನಗರದ ವ್ಯಕ್ತಿಯೊಬ್ಬ ಬರೋಬ್ಬರಿ 9.99 ಲಕ್ಷ ಕಳೆದುಕೊಂಡಿದ್ದಾನೆ. ಈ ಹಣವನ್ನು ಹೇಗಾದರೂ ಪಡೆಯಬೇಕೆಂದು ಮತ್ತೆ ಹಣ ವಾಪಸ್ ಪಡೆಯುವ ಆ್ಯಪ್ ನಂಬಿ ಮತ್ತೆ 3.01 ಲಕ್ಷ ಕಳೆದುಕೊಂಡ ಘಟನೆ ನಡೆದಿದೆ.
ವಿನೋಬ ನಗರದ ವ್ಯಾಪಾರಿ ಆಂಟೋನಿ ಬ್ರಿಜೇಶ್ ಹಣ ಕಳೆದುಕೊಂಡವರು. ಪ್ರಾಡೆಕ್ಟ್‌ಗಳನ್ನು ಖರೀದಿಸಿದರೆ ಕಮಿಷನ್ ಸಿಗುತ್ತದೆ ಎಂಬ ಆಸೆಗೆ ಬಿದ್ದು ಹಣ ಕಳೆದುಕೊಂಡಿದ್ದಾರೆ. ಟೆಲಿಗ್ರಾಂಗೆ ಬಂದ ಮೆಸೇಜ್ ಮೇಲೆ ಕ್ಲಿಕ್ ಮಾಡಿದ ಬ್ರಿಜೇಶ್ ಅವರಿಗೆ ಕಮಿಷನ್ ಆಸೆ ತೋರಿಸಿ ಟ್ರಯಲ್ ಅಕೌಂಟ್‌ಗೆ ಕ್ಲಿಕ್ ಮಾಡಲು ಸೂಚಿಸಿದ್ದಾರೆ.ಆ ವೇಳೆ ಕ್ಲಿಕ್ ಮಾಡಿದಾಗ ಬ್ರಿಜೇಶ್ ಅವರಿಗೆ 1200 ಬಂದಿದೆ.
ಹೀಗೆ ಮುಂದುವರಿಸುತ್ತಾ ಹೋದಂತೆ ಎರಡು ಹಂತಗಳಲ್ಲಿ ಇವರು ಹಾಕಿದ್ದಕ್ಕಿಂತ ಹೆಚ್ಚಿನ ಹಣ ಬಂದಿದೆ. ಆಗ ಹೆಚ್ವಿನ ಹಣದ ಆಸೆಗೆ ಬಿದ್ದ ಬ್ರಿಜೇಶ್ ಬರೋಬ್ಬರಿ 9.99 ಲಕ್ಷದಷ್ಟು ಹಣವನ್ನು ಹಾಕಿದ್ದಾರೆ. ಆದರೆ ಅವರು ಟಾಸ್ಕ್ ಪೂರ್ಣಗೊಳಿಸದೇ ಇರುವುದರಿಂದ ಹಣ ಹಾಕಲು ಸಾಧ್ಯವಿಲ್ಲ ಎಂದಿದ್ದಾರೆ. ಆಗ ಇದು ಆನ್ ಲೈನ್ ವಂಚನೆ ಎಂಬುದು ಗೊತ್ತಾಗಿದೆ.
ಮೋಸ ಹೋದವರಿಗೆ ಹೆಲ್ಪ್ ಮಾಡುವವರ ಬಗ್ಗೆ ಫೇಸ್‌ಬುಕ್‌ನಲ್ಲಿ ಸರ್ಚ್ ಮಾಡಿದಾಗ ಗೋಲ್ಡನ್ ವೆಕ್ಟರಿ ಎಂಬ ಹೊಸ ಆ್ಯಪ್‌ನಲ್ಲಿ ಮೋಸದ ಹಣವನ್ನು ವಾಪಸ್ ಕೊಡಿಸುತ್ತೇನೆ ಎಂದು ನಂಬಿಸಿ ಮತ್ತೆ 3.01 ಲಕ್ಷ ಮೋಸ ಮಾಡಲಾಗಿದೆ.ಈ ಕುರಿತು ಸೈಬರ್ ಕ್ರೈಮ್ ಠಾಣೆಯಲ್ಲಿ ದೂರು ದಾಖಲಾಗಿದೆ.