ದಾವಣಗೆರೆ: ಅಬುದಾಬಿಯ ಖಲೀಫ್ ಯುನಿವರ್ಸಿಟಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಉಪನ್ಯಾಸಕರೊಬ್ಬರಿಗೆ ಆನ್ ಲೈನ್ ಕನ್ಸಲ್ಟೆಂನ್ಸಿ 4.22 ಲಕ್ಷ ವಂಚನೆ ಮಾಡಿದ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ.
ನಗರದ ಡಿಸಿಎಂ ಬಡಾವಣೆ ನಿವಾಸಿಯಾದ ಉಪನ್ಯಾಸಕ ಉದಯ ಇಟಗಿ ಅವರು ಆನ್ ಲೈನ್ ಕನ್ಸಲ್ಟೆಂನ್ಸಿ ಯಿಂದ ಮೋಸಕ್ಕೆ ಒಳಗಾದವರಾಗಿದ್ಧಾರೆ. ಕಳೆದ 5 ವರ್ಷದ ಹಿಂದೆ ಉದಯ ಇಟಗಿ ಅವರು ನೌಕರಿ ಟಾಟ್ ಕಾಂ ವೆಬ್ ಸೈಟ್ ನಲ್ಲಿ ಕೆಲಸಕ್ಕಾಗಿ ಬಯೋ ಡೇಟಾ ಸಲ್ಲಿಸಿದ್ದರು. ಅಲ್ಲಿಂದ ಮೊಲೈಲ್ ನಂಬರ್ ಪಡೆದ ಅಪರಿಚ ವ್ಯಕ್ತಿ ಗ್ಲೋಬಲ್ ಟ್ಯಾಲೆಂಟ್ ಕನ್ಸಲ್ಟೆನ್ಸಿ ಕಂಪನಿಯವರು ಎಂದು 2021 ಜೂನ್ ನಲ್ಲಿ ಕಾಲ್ ಮಾಡಿದ್ದಾರೆ. ನೀವು ನೌಕರಿ ಡಾಟ್ ಕಾಂ ನಲ್ಲಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದೀರಿ, ನಿಮಗೆ ಅಬುದಾಬಿಯ ಖಾಲೀಫ್ ಯೂನಿವರ್ಸಿಟಿಯಲ್ಲಿ ಇಂಗ್ಲೀಷ್ ಉಪನ್ಯಾಸಕ ಹುದ್ದೆ ಖಾಲಿ ಇದ್ದು, ನಮ್ಮ ಕನ್ಸಲ್ಟೆಂನ್ಸಿ ಮೂಲಕ ಕೆಲಸ ಕೊಡಿಸುತ್ತೇವೆ ಎಂದು ಮೇಲ್ ಮೂಲಕ ಮಾಹಿತಿ ನೀಡಿದ್ದಾರೆ.
ಕನ್ಸಲ್ಟೆಂನ್ಸಿ ರಿಜಿಸ್ಟ್ರೇಷನ್, ಪ್ರೋಸಸಿಂಗ್ ಫೀ ಅಂತಾ ವಿವಿಧ ಹಂತದಲ್ಲಿ ಒಟ್ಟು 4,22,848 ರೂಪಾಯಿ ಹಣವನ್ನು ಉದಯ ಇಟಗಿ ಅವರು ವಿವಿಧ ಬ್ಯಾಂಕ್ ಮೂಲಕ ಗ್ಲೋಬಲ್ ಟ್ಯಾಲೆಂಟ್ ಕನ್ಸಲ್ಟೆನ್ಸಿ ಕಂಪನಿಗೆ ಹಣ ತುಂಬಿದ್ದಾರೆ. ಹಣ ತುಂಬಿದ ನಂತರ ಕೆಲಸಕ್ಕಾಗಿ ಕಾಲ್ ಮಾಡಿದ್ಧಾಗ ಪ್ರೋಸಸ್ ನಲ್ಲಿದೆ ಎಂದು ಪದೇ ಪದೇ ಹೇಳಿದ್ದಾರೆ. ಇದರಿಂದ ಅನುಮಾನಗೊಂಡು ಇದೊಂದು ಆನ್ ಲೈನ್ ವಂಚನೆ ಎಂದು ನಗರದ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.