ದಾವಣಗೆರೆ: ಮೊಲೈಲ್ ನ ಟೆಲಿಗ್ರಾಂ ಆಪ್ ಮೂಲಕ ಬಂದ ಪಾರ್ಟ್ ಟೈಮ್ ಕೆಲಸದ ಸಂದೇಶದ ಮೇಲೆ ಕ್ಲಿಕ್ ಮಾಡಿದ ನಗರದ ವ್ಯಕ್ತಿಯೊಬ್ಬ ಬರೋಬ್ಬರಿ 15,72,479 ರೂ. ಕಳೆದುಕೊಂಡ ಘಟನೆ ನಡೆದಿದೆ.
ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಬೇಕರಿ ಉತ್ಪನ್ನ ತಯಾರಿಕೆ ತರಬೇತಿ
ಜಾಲಿನಗರದ ಬಂಗಾರದ ಕೆಲಸ ಮಾಡುವ ವ್ಯಕ್ತಿಯೊಬ್ಬರಿಗೆ ಟೆಲಿಗ್ರಾಂನಲ್ಲಿ ಪಾರ್ಟ್ ಟೈಮ್ ಕೆಲಸದ ಸಂದೇಶ ಬಂದಿತ್ತು. ಅದರಲ್ಲಿ ನೀಡಲಾಗಿದ್ದ ಲಿಂಕ್ ಮೂಲಕ ಸಂಪರ್ಕಿಸಿದಾಗ, ವಂಚಕರು ಎಕ್ಸ್‌ಕ್ಲೂಸಿವ್ ಪ್ರಾಜೆಕ್ಟ್ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿದ್ದರು. ಆರಂಭದಲ್ಲಿ 10,000 ರೂ. ಹೂಡಿಕೆ ಮಾಡಿದಾಗ 5,000 ರೂ. ಲಾಭದ ಬೋನಸ್ ನೀಡಿ ದೂರುದಾರರ ವಿಶ್ವಾಸ ಗಳಿಸಿದ್ದರು.
ದಾವಣಗೆರೆ: ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿದ್ದ ಗಾಂಜಾ ವಶ | ಇಬ್ಬರು ಆರೋಪಿಗಳ ಬಂಧನ
ಹೆಚ್ಚಿನ ಲಾಭದ ಆಸೆ ತೋರಿಸಿದ ವಂಚಕರು, ವ್ಯಕ್ತಿಯಿಂದ ಹಂತ ಹಂತವಾಗಿ ವಿವಿಧ ಬ್ಯಾಂಕ್ ಖಾತೆಗಳ ಮೂಲಕ ಒಟ್ಟು 15,72,479 ರೂ. ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಹಣ ವಾಪಸ್ ಪಡೆಯಲು ಹೋದಾಗ, ಮತ್ತೆ 6 ಲಕ್ಷ ರೂ. ತೆರಿಗೆ ಪಾವತಿಸಬೇಕು. ಇಲ್ಲದಿದ್ದರೆ ಮೊದಲಿನ ಹಣ ಸಿಗುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ವಂಚನೆಗೆ ಒಳಗಾದದ್ದನ್ನು ಅರಿತ ವ್ಯಕ್ತಿ ಕೂಡಲೇ ಸೈಬರ್ ಕ್ರೈಮ್ ಪೋರ್ಟಲ್ 1930’ಗೆ ಕರೆ ಮಾಡಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ದಾವಣಗೆರೆ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



