ದಾವಣಗೆರೆ: ಬ್ಯಾಂಕ್ ಕಸ್ಟಮರ್ ಸರ್ವಿಸ್ ಪಾಯಿಂಟ್ ಏಜೆನ್ಸಿ ನೀಡುವುದಾಗಿ ನಂಬಿಸಿ 2.11 ಲಕ್ಷ ವಂಚನೆ ಮಾಡಿದ ಘಟನೆ ನಡೆದಿದೆ.
ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕಾರಿಗನೂರು ಗ್ರಾಮದ ನವೀನ್ ನಾಯ್ಕ್ ಹಣ ಕಳೆದುಕೊಂಡ ವ್ಯಕ್ತಿಯಾಗಿದ್ಧಾರೆ. ನವೀನ್ ಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ, ನಿಮ್ಮ ಊರಿಗೆ ಬ್ಯಾಂಕ್ ಕಸ್ಟಮರ್ ಸರ್ವಿಸ್ ಪಾಯಿಂಟ್ ಹಾಕಬೇಕು ಎಂದುಕೊಂಡಿದ್ದೇವೆ. ಅಸು ನಿಮಗೆ ಬೇಕಾ ಎಂದು ಕೇಳಿದ್ದಾರೆ. ನವೀನ್ ಜೀವನಕ್ಕೆ ಒಂದು ದಾರಿ ಸಿಗುತ್ತೆ ಎಂದು ನಂಬಿ, ಅಪರಿಚಿತ ವ್ಯಕ್ತಿ ಹೇಳಿದಂತೆ ಎಲ್ಲಾ ದಾಖಲಾತಿ ವಾಟ್ಸಾಪ್ ಮೂಲಕ ಕಳುಹಿಸಿ ಕೊಟ್ಟಿದ್ಧಾರೆ. ನಂತರ ಡಿಪಾಸಿಟ್ ಸೇರಿದಂತೆ ವಿವಿಧ ಕಾರಣ ಹೇಳಿ ಒಟ್ಟು 2.11 ಲಕ್ಷ ಖಾತೆಗೆ ಹಾಕಿಸಿಕೊಂಡು ವಂಚನೆ ಮಾಡಿದ್ದಾನೆ. ಈ ಬಗ್ಗೆ ನವೀನ್ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ



