Connect with us

Dvgsuddi Kannada | online news portal | Kannada news online

ದಾವಣಗೆರೆ: ಸಿಮ್ ನಂಬರ್‌ ಮೂಲಕ ಮನಿ ಲ್ಯಾಂಡರಿಂಗ್ ಕೇಸ್; ಅರೆಸ್ಟ್ ಮಾಡುವುದಾಗಿ ಹೆದರಿಸಿ ವ್ಯಕ್ತಿಯೊಬ್ಬರಿಗೆ 34 ಲಕ್ಷ ವಂಚನೆ

ದಾವಣಗೆರೆ

ದಾವಣಗೆರೆ: ಸಿಮ್ ನಂಬರ್‌ ಮೂಲಕ ಮನಿ ಲ್ಯಾಂಡರಿಂಗ್ ಕೇಸ್; ಅರೆಸ್ಟ್ ಮಾಡುವುದಾಗಿ ಹೆದರಿಸಿ ವ್ಯಕ್ತಿಯೊಬ್ಬರಿಗೆ 34 ಲಕ್ಷ ವಂಚನೆ

ದಾವಣಗೆರೆ: ನಿಮ್ಮ ಸಿಮ್ ನಂಬರ್‌ ಮೂಲಕ ಮನಿ ಲ್ಯಾಂಡರಿಂಗ್ ನಡೆದಿದ್ದು, ನಿಮ್ಮನ್ನು ಅರೆಸ್ಟ್ ಮಾಡಬೇಕಾಗುತ್ತದೆ.  ನಾವು ಹೇಳಿದಂತೆ ಕೇಳಿದ್ರೆ ನಿಮ್ಮ ಹಣ ಸೇಫ್ ಆಗುತ್ತೆ ಎಂದು ವ್ಯಕ್ತಿಯೊಬ್ಬರಿಗೆ ಹೆದರಿಸಿ, ಕುಟುಂಬದ ಎಲ್ಲಾ ಸದಸ್ಯರ ಹಣ ಒಂದೇ ಖಾತೆಗೆ ಹಾಕಿಸಿಕೊಂಡು ಬರೋಬ್ಬರಿ 34 ಲಕ್ಷ ವಂಚನೆ ನಡೆಸಿದ ಘಟನೆ ನಗರದಲ್ಲಿ ನಡೆದಿದೆ.

Money laundering ಕೇಸು ದಾಖಲಾಗಿದೆ ಎಂದು ಹೇಳಿ ಒಟ್ಟು ರೂ.34,00,000/- ಗಳನ್ನು RTGC ಮಾಡಿಸಿಕೊಂಡು ವಂಚನೆ ಮಾಡಿದ್ದು, ಸದರಿ ವ್ಯಕ್ತಿಯನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ ಮೇರೆಗೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಳ್ಳಲಾಗಿರುತ್ತದೆ.

13.09.2024 ರಂದು ಠಾಣೆಗೆ ಹಾಜರಾಗಿ ದೂರು ನೀಡಿದ್ದು, ದಿನಾಂಕ:12.09.2024 ರಂದು ಮನೆಯಲ್ಲಿರುವಾಗ ಬೆಳಿಗ್ಗೆ 08.56 ಗಂಟೆಗೆ ಅನಾಮಧೇಯ ನಂಬರ್ ನಿಂದ ಕರೆ ಮಾಡಿ ನಾವು Trai ನಿಂದ ಕರೆ ಮಾಡುತ್ತಿದ್ದೇವೆ ನಿಮ್ಮ ಹೆಸರಿನಲ್ಲಿ ಖರೀದಿಸಿರುವ ಸಿಮ್ Money laundering ಪ್ರಕರಣದಲ್ಲಿ ಬಳಕೆಯಾಗಿದ್ದು ನಿಮ್ಮ ಮೇಲೆ 17 ಪ್ರಕರಣಗಳು ದಾಖಲಾಗರುತ್ತದೆ. ನಿಮ್ಮ ಮೇಲೆ ದಾಖಲಾಗಿರುವ ಪ್ರಕರಣಗಳ ಬಗ್ಗೆ ಮಾಹಿತಿ ಪಡೆಯಲು ನಿಮ್ಮ ಆಧಾರ್ ಕಾರ್ಡ್ ನಂಬರ್ ನೀಡುವಂತೆ ಕೇಳಿದಾಗ ಅವರು ಕಳುಹಿಸಿದ ಅನಾಮಧೇಯ ನಂಬರ್ ಗೆ ನನ್ನ ಆಧಾರ್ ಕಾರ್ಡ್ ಪ್ರತಿಯನ್ನು ವಾಟ್ಸಾಪ್ ಮಾಡಿದಾಗ ಅವರು ನಿಮ್ಮ ಮೇಲೆ ಹಲವು ರಾಜ್ಯಗಳಲ್ಲಿ Money laundering ಕೇಸುಗಳು ದಾಖಲಾಗಿದ್ದು. ನಿಮ್ಮ ಮೇಲೆ Arrest Warrant ಜಾರಿಯಾಗಿದ್ದು. ನಿಮ್ಮನ್ನು ಈ ಕೂಡಲೇ ಬಂಧನ ಮಾಡುತ್ತೇವೆ. ನೀವು ಮುಂಬೈ ತಿಲಕ್ ನಗರ ಪೊಲೀಸ್ ಠಾಣೆಗೆ ಬರಬೇಕಾಗುತ್ತದೆ ಎಂದು ಹೇಳಿದಾಗ ನಾನು ಏಕೆ ಬರಬೇಕು ಎಂದು ಹೇಳಿದಾಗ ರವರು ಒಂದು Arrest warrant, ಕಳುಹಿಸಿ ನಿಮ್ಮ ವಿರುದ್ದ FEMA, PMLA ಆಕ್ಟ್ ರೀತ್ಯಾ Directorate of enforcement ನಲ್ಲಿ ಪ್ರಕರಣ ದಾಖಲಾಗಿರುತ್ತದೆ. ಎಂದು ಹೇಳಿ Directorate of enforcement ಲೇಟರ್ ಹೇಡ್ ಇರುವ ಒಂದು ಪತ್ರ ಕಳುಹಿಸಿದರು ನಂತರ ಅನಾಮಧೇಯ ನಂಬರ್ ನಿಂದ ವಾಟ್ಸಾಪ್ ವಿಡಿಯೋ ಕಾಲ್ ಮಾಡಿದ್ದು. ಸದರಿ ವಿಡಿಯೋ ಕಾಲ್ ನಲ್ಲಿ ಪೊಲೀಸ್ ಡ್ರೇಸ್ ನಲ್ಲಿ ಮಾತನಾಡಿದರು.

ನಮ್ಮ ಮೇಲಾಧಿಕಾರಿಗಳ ಜೊತೆ ಮಾತನಾಡಿ ಎಂದು ಅವರ ಮೇಲಾಧಿಕಾರಿಗಳಿಗೆ ಪೋನ್ ಕೊಟ್ಟಿದ್ದು. ಅವರು ನನ್ನ ಹೇಮರಾಜ್ ಕೋಲಿ ರವರ ಜೊತೆ ಮಾತನಾಡಿಸಿದರು ನಂತರ ನಿಮಗೆ ನಾವು ಸಹಾಯ ಮಾಡುತ್ತೇವೆ. ಅಂತಾ ಹೇಳಿ ನಂತರ Anti corruption Commissioner ವಿ.ಜಿ ಪಾಟೀಲ್ ರವರ ಜೊತೆ ಮಾತನಾಡಿ ಅವರು ಸಹಾಯ ಮಾಡಿದರೆ ನಾವು ನಿಮ್ಮ ಪ್ರಕರಣವನ್ನು Priority Complainant ತೆಗೆದುಕೊಂಡು investigation ಮಾಡಿ ನಿಮಗೆ ಸಹಾಯ ಮಾಡುತ್ತಾರೆಂದು ಹೇಳಿ Anti corruption Commissioner ವಿ.ಜಿ ಪಾಟೀಲ್ ರವರ ಜೊತೆ ವಿಡಿಯೋ ಕಾಲ್ ಮಾಡಿ ಕೊಟ್ಟಿದ್ದು. ನಾನು ವಿ.ಜಿ ಪಾಟೀಲ್ ರವರ ಜೊತೆ ಮಾತನಾಡಿದಾಗ ನಾವು ನಿಮಗೆ ಸಹಾಯ ಮಾಡುತ್ತೇವೆ. ಅಂತಾ ಹೇಳಿ ನೀವು Innocent ಇದ್ದರೆ ಒಂದು Return Complaint ಕೊಡಿ ಅಂತಾ ಹೇಳಿದರು ಸದರಿಯವರು ನನ್ನ ಹೆಸರಿನಲ್ಲಿ ಒಂದು ಕೌಂಟರ್ ಎಫ್.ಐ.ಆರ್ ಮಾಡಿರುವುದಾಗಿ ತಿಳಿಸಿದರು.

ನಂತರ ನಿಮ್ಮ Money laundering ಕೇಸಿನ ಬಗ್ಗೆ RBI ಚೆಕ್ ಮಾಡುತ್ತಾರೆ. ನಿಮ್ಮ ಕುಟುಂಬದವರ ಎಲ್ಲರ ಅಕೌಂಟ್ ನಲ್ಲಿರುವ ಹಣವನ್ನು ಒಂದು ಅಕೌಂಟ್ ಗೆ ಹಾಕಿಕೊಂಡು ನಾವು ಕಳುಹಿಸುವ ಅಕೌಂಟ್ ಗೆ RTGC ಮಾಡಿ RBI ನವರು ನಿಮ್ಮ ಅಕೌಂಟ್ ಗಳನ್ನು ಚೆಕ್ ಮಾಡಿ ನೀವು Innocent ಇದ್ದರೆ 03 ದಿನಗಳಲ್ಲಿ ನಿಮ್ಮ ಹಣ ವಾಪಸ್ಸು ಬರುತ್ತದೆ ಎಂದು ಹೇಳಿ ನಿಮ್ಮ ಬಳಿ ಎಷ್ಟು ಹಣ ಇದೇ ಅಂತಾ ಕೇಳಿದಾಗ ನಾನು 34 ಲಕ್ಷ ಇದೇ ಅಂತಾ ಹೇಳಿದಾಗ ಸದರಿ 34 ಲಕ್ಷ ಹಣವನ್ನು ನಾವು ಕಳುಹಿಸುವ ಅಕೌಂಟ್ ಗೆ ಹಾಕಿ ಅಂತಾ ಹೇಳಿ SBI ಬ್ಯಾಂಕಿನ ಖಾತೆಯ ನಂಬರನ್ನು ಕಳುಹಿಸಿದ್ದು. ಅದರಂತೆ ನಾನು ಈ ಕೆಳಕಂಡಂತೆ ಹಣವನ್ನು ಅವರು ತಿಳಿಸಿ ಖಾತೆಗೆ ಪಿರ್ಯಾದಿಯವರು RTGC ಮಾಡಿರುತ್ತಾರೆ.

ನಂತರ ನೀವು ನ್ಯಾಷನಲ್ ಸಿಕ್ರೇಟ್ ಆಕ್ಟ್ ಪ್ರಕರ ನೀವು ಹಣ ಹಾಕಿರುವ ವಿಚಾರವನ್ನು ಯಾರಿಗೂ ಹೇಳಬಾರದು ಹೇಳಿದರೆ ನಿಮ್ಮ ಲೈಫ್ ಗೆ ತೊಂದರೆಯಾಗುತ್ತದೆ ಎಂದು ಹೇಳಿದರು
ಈ ದಿನ ಪಿರ್ಯಾದಿ ಪರಿಚಯಸ್ಥರ ಬಳಿ ಈ ವಿಚಾರದ ಬಗ್ಗೆ ತಿಳಿಸಿದಾಗ ಯಾರೋ ಅಪರಿಚಿತರು ನಿಮಗೆ ವಂಚನೆ ಮಾಡಿರುತ್ತಾರೆಂದು ಈ ಬಗ್ಗೆ ದೂರನ್ನು ಕೊಡಿ ಅಂತಾ ತಿಳಿಸಿದಾಗ ದೂರು ನೀಡಿದ್ದಾರೆ.

ಸಾರ್ವಜನಿಕರ ಗಮನಕ್ಕೆ:ನಾವು Trai/ Directorate of enforcement, NCB, ED, CBI, IB ಸೇರಿದಂತೆ ಪ್ರಮುಖ ತನಿಖಾ ಏಜೇನ್ಸಿಗಳ ಹೆಸರಿನಲ್ಲಿ ಕರೆ ಮಾಡುತ್ತಿದ್ದೇವೆ ನಿಮ್ಮ ಆಧಾರ್ ಕಾರ್ಡ್ ಉಪಯೋಗಿಸಿಕೊಂಡು, ನಿಮ್ಮ ಹೆಸರಿನಲ್ಲಿ ಹೊಸ ಸಿಮ್ ಖರಿದಿ ಮಾಡಿ, ನಿಮ್ಮ ಹೆಸರಿನಲ್ಲಿ ಖರೀದಿಸಿರುವ ಸಿಮ್ Money laundering ಪ್ರಕರಣದಲ್ಲಿ ಬಳಕೆಯಾಗಿದ್ದು, ನಿಮ್ಮ ಮೇಲೆ ಹಲವು ರಾಜ್ಯಗಳಲ್ಲಿ Money laundering ಕೇಸುಗಳು ದಾಖಲಾಗಿದ್ದು. ನಿಮ್ಮ ಮೇಲೆ Arrest Warrant ಜಾರಿಯಾಗಿದ್ದು. ನಿಮ್ಮನ್ನು ಈ ಕೂಡಲೇ Arrest ಮಾಡುತ್ತೇವೆ. ನೀವು ಮುಂಬೈ /ದೆಹಲಿ ಸೇರಿದಂತೆ ರಾಜ್ಯಗಳಲ್ಲಿನ ಪೊಲೀಸ್ ಠಾಣೆಗೆ ಬರಬೇಕಾಗುತ್ತದೆ ಎಂದು ಹೇಳಿದಾಗ, ನಾನು ಏಕೆ ಬರಬೇಕು ಎಂದು ಹೇಳಿದಾಗ ರವರು ಒಂದು Arrest warrant, ಕಳುಹಿಸಿ ನಿಮ್ಮ ವಿರುದ್ದ FEMA, PMLA ಆಕ್ಟ್ ರೀತ್ಯಾ ವಿವಿಧ ತನಿಖಾ ಸಂಸ್ಥೆಗಳ (ಉದಾ: Directorate of enforcement, NCB, ED, CBI, IB) ಹೆsರಿನಲ್ಲಿ ಪ್ರಕರಣ ದಾಖಲಾಗಿರುತ್ತದೆ. ಎಂದು ತನಿಖಾ ಸಂಸ್ಥೆಗಳ ಲೇಟರ್ ಹೇಡ್ ಇರುವ ಒಂದು ಪತ್ರ ಕಳುಹಿಸಿ, ನಂತರ ಮೊಬೈಲ್ ನಂಬರ್ ನಿಂದ Whatsapp ವಿಡಿಯೋ ಕಾಲ್ ಮಾಡಿ, ಸದರಿ ವಿಡಿಯೋ ಕಾಲ್ ನಲ್ಲಿ ಪೊಲೀಸ್ ಡ್ರೇಸ್ ನಲ್ಲಿ ಇರುವವರು ಮಾತನಾಡಿ, ನಂತರ ನಮ್ಮ ಮೇಲಾಧಿಕಾರಿಗಳ ಜೊತೆ ಮಾತನಾಡಿ ಎಂದು ಅವರ ಮೇಲಾಧಿಕಾರಿಗಳಿಗೆ ಪೋನ್ ಕೋಡುತ್ತಾರೆ. ಅವರು ನಿಮ್ಮ ಜೊತೆ ಮಾತನಾಡಿ ನಂತರ ನಿಮಗೆ ನಾವು ಸಹಾಯ ಮಾಡುತ್ತೇವೆ. ಅಂತಾ ಹೇಳಿ ನಂತರ Anti corruption Commissioner ರವರ ಜೊತೆ ಮಾತನಾಡಿ ಅವರು ಸಹಾಯ ಮಾಡಿದರೆ ನಾವು ನಿಮ್ಮ ಪ್ರಕರಣವನ್ನು Priority Complainant ತೆಗೆದುಕೊಂಡು investigation ಮಾಡಿ ನಿಮಗೆ ಸಹಾಯ ಮಾಡುತ್ತಾರೆಂದು ಹೇಳಿ Anti corruption Commissioner ರವರ ಜೊತೆ ವಿಡಿಯೋ ಕಾಲ್ ಮಾಡಿ ಕೊಡುತ್ತಾರೆ. ನಂತರ ಅವರು ನಿಮ್ಮ ಜೊತೆ ಮಾತನಾಡಿ ನಾವು ನಿಮಗೆ ಸಹಾಯ ಮಾಡುತ್ತೇವೆ. ಎಂದು ವಿವಿಧ ಹಂತಗಳಲ್ಲಿ ಮಾತನಾಡಿ ನಿಮ್ಮನ್ನು ಭಯಗೊಳಿಸಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ತನಿಖೆಗೆ ಎಂದು ನಿಮ್ಮ ಖಾತೆಗಳಲ್ಲಿರುವ ಹಣವನ್ನು ಅವರ ಖಾತೆಗಳಿಗೆ ಹಣ ವರ್ಗಾಯಿಸಿಕೊಂಡು ತನಿಖಾ ವಿಚಾರವಾಗಿರುವುದರಿಂದ ಯಾರಿಗೂ ಈ ಬಗ್ಗೆ ಹೇಲಬೇಡಿ ಎಂದು ಎಚ್ಚರಿಕೆ ನೀಡಿ ವಂಚಿಸುತ್ತಾರೆ ಆದ್ದರಿಂದ ಸಾರ್ವಜನಿಕರು ಇಂತಹ ವಂಚನೆಗಳಿಗೆ ಬಲಿಯಾಗದೇ ಕೂಡಲೇ ಎಚ್ಚರ ವಹಿಸಿ ಅಂತಹ ಕರೆಗಳಿಗೆ ಸ್ಪಂದಿಸದೇ ಇರುವುದು ಹಾಗು ಸ್ಥಳೀಯ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಬೇಕು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top