ದಾವಣಗೆರೆ: ಆಧಾರ್ ನಂಬರ್, ಬ್ಯಾಂಕ್ ಮಾಹಿತಿ ಪಡೆದು 3.57 ಲಕ್ಷ ವಂಚನೆ; ಸೈಬರ್ ವಂಚನೆ ಬಗ್ಗೆ ಎಚ್ಚರಿಕೆ ವಹಿಸಿಸುಂತೆ ಪೊಲೀಸ್ ಇಲಾಖೆ ಸೂಚನೆ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ: ಆನ್ ಲೈನ್ ವಂಚನೆಯ ವಿಭಿನ್ನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಮಾದಕ ವಸ್ತು ಸಾಗಾಣಿಕೆಯಲ್ಲಿ ನಿಮ್ಮ ಆಧಾರ್ ನಂಬರ್ ಬಳಕೆಯಾಗಿದೆ‌ ಎಂದು ಅಪರಿಚಿತ ವ್ಯಕ್ತಿ ಕರೆ ಮಾಡಿ, ಬ್ಯಾಂಕ್ ಅಧಿಕಾರಿ, ಪೊಲೀಸರ ಸೋಗಿನಲ್ಲಿ ದಾವಣಗೆರೆಯ ವ್ಯಕ್ತಿಯೊಬ್ಬರ ಆಧಾರ್ ನಂಬರ್, ಬ್ಯಾಂಕ್ ಮಾಹಿತಿ ಪಡೆದು 3.57 ಲಕ್ಷ ವಂಚಿಸಿದ ಘಟನೆ ನಡೆದಿದೆ.

ಯಾರೂ ಅಪರಿಚಿತ ವ್ಯಕ್ತಿ ಮೊಬೈಲ್ ನಂ 7808775255 ನಿಂದ ಕರೆ ಮಾಡಿ Fedex ಕೋರಿಯರ್ ನಲ್ಲಿ ಮಾದಕ ವಸ್ತು ಪಾಸ್ ಪೂರ್ಟ ಗಳನ್ನು ನಿಮ್ಮ ಆಧಾರ್ ಕಾರ್ಡ ಪುರಾವೆಯ ಮೂಲಕ ಮುಂಬೈ ಯಿಂದ ತೈವಾನ್ ಗೆ ಕಳುಹಿಸುತ್ತಿದ್ದಿರಾ ಅಂತಾ ಹೇಳಿ ನನ್ನಿಂದ ರೂ 3,57,780/- ಹಣವನ್ನು ಆನ್ ಲೈನ್ ಮೂಲಕ ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಿದ್ದಾರೆ ದಾವಣಗೆರೆ ಸಿಇಎನ್ ಪೊಲೀಸ್ ಠಾಣೆಗೆ ಆನ್ ಲೈನ್ ಮೂಲಕ ಪ್ರಕರಣ ದಾಖಲಿಸಿದ್ದಾರೆ.

ದೂರುದಾರರು ಕೆಲಸ ಮಾಡುವ ಕಂಪನಿ ಗುಜರಾತ್ ರಾಜ್ಯದ ಅಮದಾಬಾದ್ ನICICI Bank ನಲ್ಲಿ ಖಾತೆ ಮಾಡಿಕೊಟ್ಟಿದ್ದು ಸದರಿ ಖಾತೆಗೆ ತಮ್ಮ ಮೊ.ನಂಬರ್ ಲಿಂಕ್ ಮಾಡಿಸಿರುತ್ತಾರೆ. ದಿನಾಂಕ:-13/06/2024 ರಂದು ಬೆಳಗ್ಗೆ 08-45 ಗಂಟೆಗೆ 7808775255 ನಂಬರಿನಿಂದ ಯಾರೂ ಅಪರಿಚಿತ ವ್ಯಕ್ತಿ ಕರೆ ಮಾಡಿ ನಾವು Fedex Courior ನ ಉದ್ಯೋಗಿ ಯಾಗಿದ್ದು , ನೀವು Courior ಮೂಲಕ ಮಾದಕ ವಸ್ತು ಪಾಸ್ ಪೂರ್ಟ ಗಳನ್ನು ನಿಮ್ಮ ಆಧಾರ್ ಕಾರ್ಡ ಪುರಾವೆಯ ಮೂಲಕ ಮುಂಬೈ ಯಿಂದ ತೈವಾನ್ ಗೆ ಕಳುಹಿಸುತ್ತಿದ್ದಿರಾ ಎಂದು ಕರೆ ಮಾಡಿದ್ದಾರೆ. ಆಗ ದೂರುದಾರ ಯಾವುದೆ ಕೋರಿಯರ್ ಕಳಿಸಿಲ್ಲ ಎಂದಿದ್ದಾರೆ. ಆಹ ವಂಚಕ, ಇದು ಮಾದಕ ವಸ್ತು ಹಾಗು ಟ್ರಾವಲಿಂಗ್ ಪಾಸ್ ಪೋರ್ಟ ಗೆ ಸಂಬಂದಿಸಿರುವುದಿರಂದ ಮುಂಬೈ ಪೊಲೀಸ್ ಗೆ ಕರೆ ಸಂಪರ್ಕ ಮಾಡುತ್ತೇವೆಂದು ಅಪರಿಚಿತ ಪೊಲೀಸ್ ಅಧಿಕಾರಿಯವರಿಗೆ ಕರೆ ಸಂಪರ್ಕ ಮಾಡಿದ್ದಾರೆ.

ಆಗ ಆಧಾರ್ ಕಾರ್ಡ ನಂಬರನ್ನು ಪಡೆದುಕೊಂಡು ನೀವು ಮುಂಬೈಗೆ ಬಂದು ಈ ಬಗ್ಗೆ ದೂರು ನೀಡಬೇಕೆಂದು ಹೇಳಿದರು, ಅಲ್ಲಿಗೆ ಬರಲು ಆಗವುದಿಲ್ಲ ಎಂದಾಗ ನೀವು ಆನ್ ಲೈನ್ ಮೂಲಕವು ದೂರು ನೀಡಬಹುದು ಎಂದು ಹೇಳಿ Skype ID 8:live:.cid.402b28669145bf2c ಯನ್ನು ನೀಡಿದರು. ಆನ್ ಲೈನ್ Statement ಪಡೆಯುವುದಾಗಿ ಹೇಳಿ, ನಿಮ್ಮ ಆಧಾರ ಕಾರ್ಡ ನಿಂದ ಮುಂಬೈ Axis ಬ್ಯಾಂಕ್ ಖಾತೆ ತೆರೆದಿದ್ದು, ಸದರಿ ಖಾತೆಯ ಮೂಲಕ ಮಾದಕ ವಸ್ತುಗಳನ್ನು ಮಾರಾಟ ಮಾಡಿದ ಹಣ ವರ್ಗಾವಣೆ ಆಗಿದೆ.‌ ಮನಿ ಲ್ಯಾಂಡರಿಂಗ್ ನಲ್ಲಿ ನಿಮ್ಮ ಖಾತೆ ಬಳಕೆಯಾಗಿದೆ. ನಿಮ್ಮ ಖಾತೆಯಲ್ಲಿರುವ ಹಣವನ್ನು ಆರ್ ಬಿ ಐ ಎಜೆಂಟ್ ಖಾತೆಗೆ ವರ್ಗಾವಣೆ ಮಾಡಿ. ಇದಕ್ಕೆ ಸಂಬಂದಿಸಿದಂತೆ Verification ಮಾಡಿದ ನಂತರ ನಿಮಗೆ ನಿಮ್ಮ ಹಣವನ್ನು ವಾಪಾಸು ನಿಮ್ಮ ಖಾತೆಗೆ ಹಾಕುತ್ತೇವೆಂದು 3,57,780/- ರೂ ಹಣವನ್ನು ಅವರ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದು, ನಂತರ ಹಣವನ್ನು ಖಾತೆಗೆ ಹಾಕದಿದ್ದಾಗ ಆನ್ ಲೈನ್ ವಂಚನೆಗೆ ನಡೆದಿರುವುದು ಗೊತ್ತಾಗಿದೆ. ಈ‌ ಬಗ್ಗೆ ದಾವಣಗೆರೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾರ್ವಜನಿಕರ ಗಮನಕ್ಕೆ: ಮೇಲ್ಕಂಡ ಪ್ರಕರಣದಲ್ಲಿ ಪಿರ್ಯಾದಿವರಿಗೆ ವಂಚನೆ ಮಾಡಿದಂತೆ ಸೈಬರ್ ವಂಚಕರು/ಆನ್ ಲೈನ್ ವಂಚಕರು ವಿವಿಧ ರೀತಿಯಲ್ಲಿ ಸಾರ್ವಜನಿಕರನ್ನು ವಂಚಿಸುತ್ತಿದ್ದು, ಸಾರ್ವಜನಿಕರು ಈ ತರಹದ ಅನಾಮಧೇಯ ಕರೆಗಳಿಗೆ ಸ್ಪಂದಿಸದೇ, ವಂಚನೆಗಳಿಗೆ ಒಳಗಾಗದೆ ಜಾಗೃತರಾಗಿರುವುದು, ಇಂತಹ ಕರೆಗಳು ಬಂದರೆ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲು ಈ ಮೂಲಕ ತಿಳಿಸಲಾಗಿದೆ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *