Connect with us

Dvgsuddi Kannada | online news portal | Kannada news online

ದಾವಣಗೆರೆ: ರಿವಾರ್ಡ್‌ ಬಂದಿದೆ ಎಂಬ ಮೆಸೇಜ್ ನಂಬಿ, 49 ಸಾವಿರ ಕಳೆದುಕೊಂಡ ಪೊಲೀಸ್ ಹೆಡ್‌ ಕಾನ್‌ಸ್ಟೆಬಲ್‌…!!

cyber crime 1

ದಾವಣಗೆರೆ

ದಾವಣಗೆರೆ: ರಿವಾರ್ಡ್‌ ಬಂದಿದೆ ಎಂಬ ಮೆಸೇಜ್ ನಂಬಿ, 49 ಸಾವಿರ ಕಳೆದುಕೊಂಡ ಪೊಲೀಸ್ ಹೆಡ್‌ ಕಾನ್‌ಸ್ಟೆಬಲ್‌…!!

ದಾವಣಗೆರೆ: ನಿಮ್ಮ ಖಾತೆಗೆ 6,660 ರೂ. ಎಸ್‌ಬಿಐ ರಿವಾರ್ಡ್‌ ಬಂದಿದೆ ಎಂದು ಅಪರಿಚಿತ ಸಂಖ್ಯೆಯಿಂದ ಬಂದ ಮೆಸೇಜ್ ಮೇಲೆ ಕ್ಲಿಕ್ ಮಾಡಿ, ಪಾಸ್ ವರ್ಡ್, ಒಟಿಪಿ ಹಾಕಿದ ಪೊಲೀಸ್ ಹೆಡ್‌ಕಾನ್‌ಸ್ಟೆಬಲ್‌ ಒಬ್ಬರು 49,897 ರೂ. ಕಳೆದುಕೊಂಡ ಘಟನೆ ನಡೆದಿದೆ‌.

ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ಕಚೇರಿಯಲ್ಲಿ ಪೊಲೀಸ್ ಹೆಡ್‌ಕಾನ್‌ಸ್ಟೆಬಲ್‌ ಆಗಿ ಕರ್ತವ್ಯ ನಿರ್ವಹಿಸುತ್ತಿರುವ, ಡಾಲರ್ಸ್ ಕಾಲೊನಿಯ ನಿವಾಸಿ ಜಯನಾಯ್ಕ ಆನ್ ಲೈನ್ ವಂಚನೆಗೆ ಒಳಗಾದವರು. 6,660 ರೂ. ಎಸ್‌ಬಿಐ ರಿವಾರ್ಡ್‌ ಪಾಯಿಂಟ್ಸ್‌ ಗಳಿಸಿದ್ದೀರಿ ಎಂದು ಅಪರಿಚಿತ ಮೊಬೈಲ್‌ ಸಂಖ್ಯೆಯಿಂದ ಬಂದಿದ್ದ ಲಿಂಕ್‌ ಕ್ಲಿಕ್‌ ಮಾಡಿದ್ದಾರೆ. ಪಾಸ್‌ವರ್ಡ್‌ ಅಪ್‌ಡೇಟ್‌ ಮಾಡಿದ ನಂತರ ಬಂದಿದ್ದ ಒಟಿಪಿಯನ್ನೂ ನಮೂದಿಸಿದ್ದಾರೆ. ಬಳಿಕ ಬ್ಯಾಂಕ್‌ ಖಾತೆ ಪರಿಶೀಲಿಸಿದಾಗ ನನ್ನ ಖಾತೆಯಿಂದ 49,897 ಕಡಿತವಾಗಿರುವುದು ಗೊತ್ತಾಯಿತು’ ಎಂದು ಜಯನಾಯ್ಕ ದೂರಿನಲ್ಲಿ ಉಲ್ಲೇಖಿಸಿದ್ದಾರೆ‌. ಈ ಬಗ್ಗೆ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top