ದಾವಣಗೆರೆ: ಆನ್ ಲೈನ್ ನಲ್ಲಿ ವಂಚಿಸಿ ಹಣ ಪೀಕುತ್ತಿದ್ದ ಐವರು ಅಂತರರಾಜ್ಯ ಸೈಬರ್ ವಂಚಕರನ್ನು ಬಂಧನ ಮಾಡಲಾಗಿದೆ. ಆನ್‌ಲೈನ್ ಮೂಲಕ ಕರ್ನಾಟಕ ರಾಜ್ಯ ಸೇರಿದಂತೆ 19 ರಾಜ್ಯಗಳಲ್ಲಿ 216 ಆನ್‌ಲೈನ್ ದೂರುಗಳು ಈ ಆರೋಪಿಗಳ ವಿರುದ್ಧ ದಾಖಲಾಗಿವೆ.
ಜಗಳೂರು ತಾಲ್ಲೂಕಿನ ಕ್ಯಾಸೇನಹಳ್ಳಿ ಗ್ರಾಮದ ಮಂಜಪ್ಪ ಅನಾಮಿಕ ಮೊಬೈಲ್ ವಿವಿಧ ನಂಬರ್‌ಗಳಿಂದ ಕಾಲ್ ಮಾಡಿ ಅನ್ ಲೈನ್ ಮೂಲಕ ಪ್ರೊಡಕ್ಟ್ ಗಳನ್ನು ಖರೀದಿಸಿದರೆ ಕಮಿಷನ್ ರೂಪದಲ್ಲಿ ಹಣ ಬರುತ್ತದೆ ಹಾಗೂ ಮನಯಿಂದಲೇ ಸುಲಭವಾಗಿ ಕೆಲಸ ಮಾಡಿ ಹಣ ಗಳಿಸಬಹುದು ಅಂತ ಹೇಳಿ 9,00,000 ರೂಪಾಯಿಗೂ ಹೆಚ್ಚು ಹಣವನ್ನು ಆನ್ ಲೈನ್ ಮೂಲಕ ಹಾಕಿಸಿಕೊಂಡು ಮೋಸ ಮಾಡಿದ್ದರು. ಈ ಅಪರಿಚಿತ ವ್ಯಕ್ತಿ ವಿರುದ್ದ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದಾವಣಗೆರೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಇಳಿದ ಪೊಲೀಸರಿಗೆ ಆನ್ ಲೈನ್ ವಂಚನೆ ಜಾಲ ಅಂತರ್ ರಾಜ್ಯದಲ್ಲಿ ವ್ಯಾಪಸಿರುವುದು ಗೊತ್ತಾಗಿದೆ. ಈ ಪ್ರಕರಣದ ಆರೋಪಿಗಳನ್ನು ತಮಿಳುನಾಡು ಬಂಧಿಸಲಾಗಿದೆ.
ಆರೋಪಿಗಳಾದ 1. ವೈತಿಲಿಂಗ (28) ಡ್ರೈವರ್ ಕೆಲಸ, ವಾಸ ತಿರುಮಲೈರಾಯನ್ ಪಟ್ಟಣಂ, ಕಾರೈಕಲ್ ಜಿಲ್ಲೆ. ಪುದುಚೇರಿ ರಾಜ್ಯ
2. ಸರ್‌ವಣನ್ (34), ರಿಯಲ್ ಎಸ್ಟೇಟ್ ಬ್ರೋಕರ್ ಕೆಲಸ, ವಾಸ:ಮುತ್ತಾಲಮನ್ ಕೋವಿಲ್ (ಟೆಂಪಲ್) ಬೀದಿ, ನೈನಾರ್ ಕೊಪ್ಪಂ, ಉತ್ತಂಡಿ ಇಎಸ್‌ಆರ್. ಕಾಂಚಿಪುರ ತಾಲ್ಲೂಕು, ಚೆನ್ನೈ ರಾಜ್ಯ, ಹಾಲಿ ವಿಳಾಸ: ನಂ ೨೯ ಎಲ್ ಐ ಸಿ ಕಾಲೋನಿ ಸರ್ಕಾರಿ ಮೆಡಿಕಲ್ ಕಾಲೇಜ್ ರಸ್ತೆ ತಾಂಜಾವೂರು. ತಮಿಳುನಾಡ
3. ಉಮೈಜ್ ಅಹಮ್ಮದ್ (37), ಕಾಲ್‌ಸೆಂಟರ್‌ನಲ್ಲಿ ಕೆಲಸ, ವಾಸ: ಬಾಲಾಜಿ ನಗರ, ರಾಯ್ ಪೆಟ್ಟಂ ಚನೈ ತಮಿಳುನಾಡು ರಾಜ್ಯ. ಹಾಲಿ ವಾಸ –ಮಹತೇಶ್ವರ ನಗರ ಡಿ ಕ್ರಾಸ್ ಬಿಟಿಎಂ ಲೇ ಔಟ್ ಬೆಂಗಳೂರು.
4. ಜುನೈದ್ ಅಹಮದ್ (33) ಇಂಟೀರಿಯರ್ ಡಿಸೈನಿಂಗ್ ಕೆಲಸ, ವಾಸ: ವೈತಿಮನೈ, ಅಂಬೂರ್ ತಾಲ್ಲೂಕು, ತಿಪತ್ತೂರು ಜಿಲ್ಲೆ,ತಮಿಳುನಾಡು ರಾಜ್ಯ.
5. ಜಾವೀದ್ ಅಹಮ್ಮದ್ (33) ವರ್ಷ, ವಾಸ: ಲಾಲ್ ಪೇಟ್, ೦೨ ನೇ ಕ್ರಾಸ್, ತಿರುಪತ್ತೂರು ಜಿಲ್ಲೆ, ತಮಿಳುನಾಡು ರಾಜ್ಯ.
ಮಾಹಿತಿ ಸಂಗ್ರಹಿಸಿ ತಮಿಳುನಾಡು ರಾಜ್ಯದ ವಿರುಧನಗರ ಸಿಇಎನ್ ಪೊಲೀಸ್ ಠಾಣೆ, ರಾಣಿಪೇಟ್ ಪೊಲೀಸ್ ಠಾಣೆ, ತಿರುವಳ್ಳರ್ ಠಾಣೆ, ಕಡಲೂರು ಠಾಣೆಗಳಲ್ಲಿ ಆರೋಪಿತರ ಆರೋಪಿತರ ವಿರುದ್ದ ಪ್ರಕರಣ ದಾಖಲಾಗಿದ್ದು, ಹಾಲಿ ವಿರುಧನಗರ ಜೈಲಿನಲ್ಲಿ ಇರುವುದಾಗಿ ತಿಳಿದು ಬಂದಿದ್ದು, ನಂತರ ಘನ ನ್ಯಾಯಾಲಯಕ್ಕೆ ಮನವಿಯನ್ನು ಸಲ್ಲಿಸಿ ಆರೋಪಿತರ ಬಾಡಿ ವಾರೆಂಟ್ ಪಡೆದು ಜ.22 ರಂದು ಘನ 03 ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ 5 ದಿನ ಪೊಲೀಸ್ ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಂಡು ಪುನ: ನ್ಯಾಯಾಯಲಯಕ್ಕೆ ಹಾಜರುಪಡಿಸಿರುತ್ತದೆ.
ಮೇಲ್ಕಂಡ ಆರೋಪಿತರು ಆನ್‌ಲೈನ್ ವಂಚನೆ ಮಾಡಿರುವ ಬಗ್ಗೆ ತನಿಖೆ ಕಾಲದಲ್ಲಿ ಆನ್‌ಲೈನ್ ಸೈಬರ್ ಪೋರ್ಟಲ್‌ನಲ್ಲಿ ಪರಿಶೀಲಿಸಲಾಗಿ ಕರ್ನಾಟಕ ರಾಜ್ಯ ಸೇರಿದಂತೆ 19 ರಾಜ್ಯಗಳಲ್ಲಿ 216 ಆನ್‌ಲೈನ್ ದೂರುಗಳು ದಾಖಲಾಗಿರುವುದು ತಿಳಿದು ಬಂದಿರುತ್ತದೆ. ಉಳಿದ ಆರೋಪಿತರ ಪತ್ತೆಗಾಗಿ ಸಿಇಎನ್ ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ.
ಮೇಲ್ಕಂಡ ಆರೋಪಿತರನ್ನು ಪತ್ತೆಮಾಡುವಲ್ಲಿ ಯಶಸ್ವಿಯಾದ ಸಿಇಎನ್ ಪೊಲೀಸ್ ನಿರೀಕ್ಷಕ ಪ್ರಸಾದ್ ಪಿ. ಸೇರಿದಂತೆ ಅಧಿಕಾರಿ ಸಿಬ್ಬಂದಿಗಳನ್ನು ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿ ವಿಜಯಕುಮಾರ್ ಎಂ ಸಂತೋಷ್ ಮತ್ತು ಜಿ ಮಂಜುನಾಥ ಪ್ರಶಂಸಿದ್ದಾರೆ.