ದಾವಣಗೆರೆ: ಶಾಲೆಯಲ್ಲಿಯೇ ಶಿಕ್ಷಕನೊರ್ವ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಹಿನ್ನೆಲೆ ಪೋಕ್ಸೊ ಕಾಯ್ದೆಯಡಿ ಶಿಕ್ಷಕನನ್ನು ಶಾಲೆಯಿಂದಲೇ ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯಿಂದ ಜಿಲ್ಲೆಯ ನಾಗರಿಕರು ಹಾಗೂ ಶಿಕ್ಷಕ ವರ್ಗ ತಲೆತಗ್ಗಿಸುವಂತಾಗಿದೆ.
ಜಿಲ್ಲೆಯ ಸರ್ಕಾರಿ ಶಾಲೆಯೊಂದರಲ್ಲಿ ಈ ದುರ್ಘಟನೆ ನಡೆದಿದೆ. ಈ ಘಟನೆ ನಡೆದು ವಾರದ ಬಳಿಕ ವಿದ್ಯಾರ್ಥಿ ತನ್ನ ಪೋಷಕರ ಈ ವಿಷಯ ಗೊತ್ತಾಗಿದೆ. ವಿಷಯ ತಿಳಿಸಿದ ತಕ್ಷಣ ಪೊಲೀಸರು ಮಹಿಳಾ ಠಾಣೆಯಲ್ಲಿ ಅಪ್ರಾಪ್ತ ಬಾಲಕಿ ಹೇಳಿಕೆ ಪಡೆದು ಶಾಲೆಯಲ್ಲಿದ್ದ ಶಿಕ್ಷಕನನ್ನು ಪೋಕ್ಸೊ (POCSO) ಕಾಯ್ದೆಯಡಿ ಬಂಧಿಸಿದ್ದಾರೆ.
ಘಟನೆ ನಡೆದು ಒಂದು ವಾರದ ಬಳಿಕವೇ ಅದು ಬೆಳಕಿಗೆ ಬಂದಿದೆ. ಅತ್ಯಾಚಾರ ಎಸಗಿದ ಕೆಲ ದಿನಗಳ ಬಳಿಕ ಅಪ್ರಾಪ್ತ ವಯಸಿನ ಬಾಲಕಿ ಅನಾರೋಗ್ಯಕ್ಕೆ ಒಳಗಾಗಿದ್ದಾಳೆ. ಶಿಕ್ಷಕ ಬಾಲಕಿಗೆ ಬೆದರಿಕೆ ಹಾಕಿದ್ದರಿಂದ ಪೋಷಕರ ಬಳಿ ಬಾಯಿ ಬಿಟ್ಟಿಲ್ಲ. ಅನಾರೋಗ್ಯಕ್ಕೆ ಚಿಕಿತ್ಸೆ ಕೊಡಿಸಲು ಪೋಷಕರು ಸರ್ಕಾರಿ ಆಸ್ಪತ್ರೆಗೆ ತೆರಳಿದಾಗ ವೈದ್ಯರು ಈ ಸೂಕ್ಷ್ಮ ಘಟನೆಯನ್ನು ಬಾಲಕಿಯ ಪೋಷಕರಿಗೆ ತಿಳಿಸಿದ್ದಾರೆ.
ಶಿಕ್ಷಕನ ಕುಕೃತ್ಯದ ಬಗ್ಗೆ ಪೋಷಕರಿಗೆ ಬಾಲಕಿ ಮಾಹಿತಿ ನೀಡಿದ್ದಾಳೆ. ಕೂಡಲೇ ಪೋಷಕರು ಹಾಗೂ ವೈದ್ಯರು ಮಹಿಳಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹಿಳಾ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಂಡು ಶಾಲೆಯಿಂದಲೇ ಶಿಕ್ಷಕನನ್ನು ಬಂಧಿಸಿದ್ದಾರೆ. ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ತನಿಖೆ ಪ್ರಗತಿಯಲ್ಲಿದೆ.



