ದಾವಣಗೆರೆ: ಬಾಲಕಿ ಮೇಲೆ ಅತ್ಯಾಚಾರವೆಸಗಿ ವೀಡಿಯೋ ಮಾಡಿಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ (social Media) ಹರಿಬಿಟ್ಟ ಆರೋಪಿಯನ್ನು ಜಿಲ್ಲಾ ಪೊಲೀಸರು ಬಂಧನ (arrest) ಮಾಡಿದ್ದಾರೆ. ಆರೋಪಿ ಮೇಲೆ ಪೋಕ್ಸೋ ಕೇಸ್ (pocso case) ದಾಖಲಾಗಿದೆ.
ಈ ಬಗ್ಗೆ ದೂರಿನ ಆಧಾರದ ಮೇಲೆ ಪ್ರಕರಣದ ಆರೋಪಿ ದೇವರಾಜ್ ಅರಸು ಬಡಾವಣೆಯ ಮೆಡಿಕಲ್ ಶಾಪ್ ನ ಅಮ್ಜಾದ್ (56 ) ಅನ್ನು ಜ. 30 ರಂದು ಬಂಧನ ಮಾಡಲಾಗಿದೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಲ್ಲಿ ಇರಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜ. 30 ರಂದು ಚನ್ನಗಿರಿ ಪೊಲೀಸ್ ಠಾಣೆಯ ಎಎಸ್ ಐ ಶಶಿಧರ್ ಹೆಚ್.ಎನ್ ದಾವಣಗೆರೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಕರ್ತವ್ಯದಲ್ಲಿರುವಾಗ ಸಂಜೆ ಸಮಯದಲ್ಲಿ ನನ್ನ ಮೊಬೈಲ್ ಗೆ ಬಾತ್ಮೀದಾರರೊಬ್ಬರು ಒಂದು ವೀಡಿಯೋ ಬಂದಿದೆ. ಆ ವೀಡಿಯೋವನ್ನು ನೋಡಿದ್ದು, ಒಬ್ಬ ವ್ಯಕ್ತಿಯು ಒಂದು ಬಾಲಕಿಯಂತೆ ಕಾಣುವ ಹೆಣ್ಣುಮಗಳನ್ನು ಬಲವಂತವಾಗಿ ಅತ್ಯಾಚಾರ ಮಾಡುತ್ತಿದ್ದು, ಈ ಅತ್ಯಾಚಾರ ಮಾಡುವ ವೀಡಿಯೋವನ್ನು ಯಾವುದೋ ಮೊಬೈಲ್ನಲ್ಲೋ ಅಥವಾ ವೀಡಿಯೋ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಈ ಬಗ್ಗೆ ಬಾತ್ಮೀದಾರರಿಗೆ ಫೋನ್ ಮಾಡಿ ವಿಚಾರಿಸಿ ಖಚಿತಪಡಿಸಿಕೊಂಡು ದೂರು ನೀಡಿದ್ದಾರೆ.
ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಮೇಲಾಧಿಕಾರಿಗಳ ಸೂಚನೆಯಂತೆ, ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದು, ಈ ಬಗ್ಗೆ ಪೋಕ್ಸೋ ಆಕ್ಟ್ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಈ ಪ್ರಕರಣದ ಆರೋಪಿತನ ಪತ್ತೆಗಾಗಿ ಎಸ್ಪಿ ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ಡಿವೈಎಸಗಪಿ ಪದ್ಮಶ್ರೀ ಗುಂಜೀಕರ್ ಮಾರ್ಗದರ್ಶನದಲ್ಲಿ ಠಾಣಾ ಸಿಬ್ಬಂದಿಯವರಾದ ಪ್ರಕಾಶ್, ಗೋವಿಂದರಾಜು ಒಳಗೊಂಡ ತಂಡ ರಚಿಸಲಾಗಿತ್ತು. ಪ್ರಕರಣದ ಆರೋಪಿ ದೇವರಾಜ್ ಅರಸು ಬಡಾವಣೆಯ ಮೆಡಿಕಲ್ ಅಮ್ಜಾದ್ (56 ) ಅನ್ನು ಜ. 30 ರಂದು ಪತ್ತೆ ಮಾಡಿ ಬಂಧನ ಮಾಡಲಾಗಿದೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಲ್ಲಿ ಇರಿಸಲಾಗಿದೆ.
ಸಾರ್ವಜನಿಕರ ಗಮನಕ್ಕೆ: ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯಿದೆ, 2005 ಮತ್ತು ಸಂಬಂಧಿತ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳ ಅಡಿಯಲ್ಲಿ, ಹೆಸರು, ವಯಸ್ಸು, ಧರ್ಮ, ವಿಳಾಸ ಮುಂತಾದ ಇತರ ಗುರುತಿಸುವ ಅಂಶಗಳನ್ನು ಒಳಗೊಂಡಂತೆ ಸಂತ್ರಸ್ತರ / ನೊಂದವರ ಗುರುತಿನ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗಪಡಿಸುವುದು ಶಿಕ್ಷಾರ್ಹ ಅಪರಾಧವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಇದೇ ರೀತಿಯ ಸಂದೇಶಗಳು ಮತ್ತು ಸಂಭಾಷಣೆಗಳು ಸಹ ಶಿಕ್ಷಾರ್ಹವಾಗಿವೆ. ಇದಲ್ಲದೆ, ಮೊಬೈಲ್ / ಇತರ ಸಾಧನಗಳಲ್ಲಿ ಮಕ್ಕಳ ಅಶ್ಲೀಲ ವಿಷಯವನ್ನು ಹೊಂದಿರುವ ವೀಡಿಯೊಗಳನ್ನು ಡೌನ್ಲೋಡ್ ಮಾಡುವುದು ಅಥವಾ ಸಂಗ್ರಹಿಸುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ.
Under the Protection of Children from Sexual Offences Act, 2005 and related Supreme Court guidelines, disclosure of any information about the identity of a victim including other identifying factors such as name, age, religion, address, etc. is a punishable offence. Messages and conversations on social media regarding the same are also punishable. Further, please note that even downloading or storing videos containing child pornographic content on mobiles/ other devices is a punishable offence.