ದಾವಣಗೆರೆ: ನಿವೃತ್ತ ಶಿಕ್ಷಕರೊಬ್ಬರಿಗೆ ಅಪರಿಚಿರ ವ್ಯಕ್ತಿಯೊಬ್ಬ ಕೆನರಾ ಬ್ಯಾಂಕ್ ಮ್ಯಾನೇಜರ್ ಎಂದು ನಂಬಿಸಿ 97 ಸಾವಿರ ರೂಪಾಯಿ ಪಂಗನಾಮ ಹಾಕಿದ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ.
ಎಂಸಿಸಿ ಬಿ ಬ್ಲಾಕ್ ನಿವಾಸಿ ಶರಣಪ್ಪ ವಂಚನೆಗೆ ಒಳಗಾದ ನಿವೃತ್ತ ಶಿಕ್ಷಕರಾಗಿದ್ದಾರೆ. ಅಪರಿಚಿತ ವ್ಯಕ್ತಿಯೊಬ್ಬ ಕಾಲ್ ಮಾಡಿ, ನಿಮ್ಮ ಎಟಿಎಂ ಕಾರ್ಡ್ ನ ಕೆವೈಸಿ ಅಪ್ಡೇಟ್ ಮಾಡಬೇಕಿದೆ. ಹೀಗಾಗಿ ನಿಮ್ಮ ಎಟಿಎಂ ಕಾರ್ಡ್ ಪಾಸ್ ವರ್ಡ್ ಮತ್ತು ಒಟಿಪಿ ನಂಬರ್ ಬೇಕಿದೆ ಎಂದು ಪಡೆದು 97 ಸಾವಿರ ರೂಪಾಯಿ ವಂಚನೆ ಮಾಡಿದ್ದಾರೆ. ಈ ಬಗ್ಗೆ ಬ್ಯಾಂಕ್ ನಲ್ಲಿ ವಿಚಾರಿಸಿದ್ದಾಗ ವಂಚನೆ ಆಗುರುವುದು ಗೊತ್ತಾಗಿದೆ. ಈ ಕುರಿತು ನಿವೃತ್ತ ಶಿಕ್ಷಕರು ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.



