ದಾವಣಗೆರೆ: ತಾಲ್ಲೂಕಿನ ಮೆಳ್ಳಕಟ್ಟೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಿಟಕಿ ಸರಳು ಮುರಿದ ಕಳ್ಳರು, 28 ಸಾವಿರ ಮೌಲ್ಯದ ಸ್ವತ್ತು ಕಳ್ಳತನ ಮಾಡಿ ಪಾರಾರಿಯಾಗಿದ್ದಾರೆ. ಶಾಲೆಯ ಕಿಟಕಿ ಮುರಿದು ಶಾಲೆ ಕೊಠಡಿಯಲ್ಲಿದ್ದ 10 ಸಾವಿರ ಮೌಲ್ಯದ ಕಂಪ್ಯೂಟರ್ ಮಾನಿಟರ್, 10 ಸಾವಿರ ಮೌಲ್ಯದ ಮೈಕ್, 5 ಸಾವಿರ ಮೌಲ್ಯದ ನೀರಿನ ಮೋಟರ್ ಹಾಗೂ 3 ಸಾವಿರ ಮೌಲ್ಯದ ಅಡುಗೆ ಎಣ್ಣೆ ಕದ್ದು ಪರಾರಿಯಾಗಿದ್ದಾರೆ ಎಂದು ಶಾಲೆಯ ಮುಖ್ಯ ಶಿಕ್ಷಕರು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.