ದಾವಣಗೆರೆ: ಅಪರಿಚಿತ ವ್ಯಕ್ತಿಯೊಬ್ಬ ನಗರದ ವೈದ್ಯೆಯೊಬ್ಬರಿಗೆ ಕಾಲ್ ಮಾಡಿ, ಬ್ಯಾಂಕ್ ಅಧಿಕಾರಿ ಎಂದು ಪರಿಚಯಿಸಿಕೊಂಡು ಮೊಬೈಗೆ ಎನಿ ಡೆಸ್ಕ್ ಆ್ಯಪ್ ಇನ್ ಸ್ಟಾಲ್ ಮಾಡಿಸಿ ಕ್ರಿಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಪಾಸ್ ವರ್ಡ್ ಪಡೆದು 1.92 ಲಕ್ಷ ವಂಚನೆ ಮಾಡಿರುವ ಘಟನೆ ನಡೆದಿದೆ.
ಎಂಸಿಸಿ ಬಿ ಬ್ಲಾಕ್ ಸ್ವಪ್ನ ವಂಚನೆಗೆ ಒಳಗಾದ ವೈದ್ಯರಾಗಿದ್ದಾರೆ. ಸ್ವಪ್ನ ಅವರು ಆ್ಯಕ್ಸಿಸ್ ಬ್ಯಾಂಕ್ ನ ಎರಡು ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರು. ಏ. 25 ರಂದು ಅವರ ಮೊಬೈಲ್ ಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ ತಾನು ಬ್ಯಾಂಕ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾರೆ. ಹೊಸ ಕಾರ್ಡ್ ಆಕ್ಟಿವ್ ಮಾಡಬೇಕಿದೆ ಎಂದು ಹಳೆ ಕಾರ್ಡ್ ಮಾಹಿತಿ ಪಡೆದುಕೊಂಡಿದ್ದಾನೆ.
ನಂತರ ಮೊಬೈಲ್ ನಲ್ಲಿ ಎನಿ ಡೆಸ್ಕ್ ಆ್ಯಪ್ ಇನ್ ಸ್ಟಾಲ್ ಮಾಡಿಸಿ, ಕ್ರಿಡಿಟ್ ಕಾರ್ಡ್ ಪಾಸ್ ವರ್ಡ್ ಪಡೆದುಕೊಂಡು ಎರಡು ಕಾರ್ಡ್ ಗಳಿಂದ ಅನೇಕ ಸಲ ಒಟ್ಟು 1.92 ಲಕ್ಷ ಡ್ರಾ ಮಾಡಿದ್ದಾನೆ. ಈ ಬಗ್ಗೆ ವೈದ್ಯೆ ಸ್ವಪ್ನ ಅವರು ಆ್ಯಕ್ಸಿಸ್ ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ಆನ್ವಲೈನ್ ವಂಚನೆ ಆಗಿರಿವುದು ಗೊತ್ತಾಗಿದೆ. ಈ ಬಗ್ಗೆ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.