ದಾವಣಗೆರೆ: ನಗರದ ಕೆಆರ್ ರಸ್ತೆಯ ಬಿ.ಟಿ. ಗಲ್ಲಿಯ ರಾಜ್ ರೆಸಿಡೆನ್ಸಿ ಅಪಾರ್ಟ್ ಮೆಂಟ್ ನ ಪಾಶ್ವನಾಥ್ ಜೈನ ಮಂದಿರದಲ್ಲಿ 3.55 ಲಕ್ಷ ಮೌಲ್ಯದ ಬೆಳ್ಳಿ ಕಿರೀಟ, ಚಿನ್ನಾಭರಣ ಕಳ್ಳತನವಾಗಿದೆ. ಮೇ. 12 ರಂದು ತಡ ರಾತ್ರಿ ಈ ಘಟನೆ ನಡೆದಿದೆ. ಬೆಳಗ್ಗೆ ಕಳ್ಳತನವಾಗಿರುವುದು ಗೊತ್ತಾಗಿದೆ. ಅಪಾರ್ಟ್ ಮೆಂಟ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಗಳು ಇದ್ದರೂ ಈ ಘಟನೆ ನಡೆದಿದೆ.
80 ಸಾವಿರ ಮೌಲ್ಯದ ಬೆಳ್ಳಿ ಕಿರೀಟ, 1.50 ಲಕ್ಷದ ಬಂಗಾರದ ಟೀಕಾ, 50 ಸಾವಿರ ಮೌಲ್ಯದ ಬಂಗಾರದ ಕೊರಳ ಪಟ್ಟಿ, 75 ಸಾವಿರ ಮೌಲ್ಯದ ಬಂಗಾರದ ಹಣೆ ಪಟ್ಟಿ ಸೇರಿ ಒಟ್ಟು 3.55 ಲಕ್ಷದ ಚಿನ್ನಾಭರಣ ಕಳ್ಳತನವಾಗಿವೆ. ಈ ಬಗ್ಗೆ ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.