ದಾವಣಗೆರೆ: ನಗರದ ದೇವರಾಜ ಅರಸ್ ಬಡಾವಣೆಯ ಬೀರಲಿಂಗೇಶ್ವರ ಕಲ್ಯಾಣ ಮಂಟಪಕ್ಕೆ ಮದುವೆಗೆ ಬಂದಿದ್ದ ಮಹಿಳೆಯ 4 ಲಕ್ಷ ಮೌಲ್ಯದ ಚಿನ್ನಾಭರಣ ಕಳವಾಗಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಕರೂರಿನ ವಿದ್ಯಾ ಎಂಬುವರ ಆಭರಣ ಕಳವಾಗಿವೆ. ಸಂಬಂಧಿಕರ ಮದುವೆಗೆ ಮೇ 15 ರಂದು ಕಲ್ಯಾಣ ಮಂಟಪಕ್ಕೆ ಬಂದಿದ್ದರು. ಊಟ ಮಾಡಲು ಹೋಗುವಾಗ ಉಳಿದು ಕೊಂಡಿದ್ದ ಕೊಠಡಿಯಲ್ಲಿ ಬ್ಯಾಗ್ ನಲ್ಲಿ ಚಿನ್ನಾಭರಣ ಇಟ್ಟು ಬೀಗ ಹಾಕಿಕೊಂಡು ಹೋಗಿದ್ದರು.
ಊಟವಾಗ ಬಳಿಕ ರೂಮ್ ಗೆ ಬಂದಾಗ ಬೀಗ ಓಪನ್ ಆಗಿದೆ. ತಕ್ಷಣ ರೂಮ್ ಒಳಗೆ ಹೋಗಿ ಬ್ಯಾಗ್ ನೋಡಿದ್ದಾಗ ಚಿನ್ನಾಭರಣ ಕಳವಾಗಿದೆ. 25 ಗ್ರಾಂ ನೆಕ್ಲೇಸ್,10 ಗ್ರಾಂ ಜುಮುಕಿ,10 ಗ್ರಾಂ ಕಿವಿ ಸುತ್ತು ಕಳವಾಗಿದೆ. ಈ ಬಗ್ಗೆ ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.