ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ದೇವನಾಯಕನಹಳ್ಳಿಯ ಮನೆಯೊಂದರಲ್ಲಿ 5.75 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ. ದೇವನಾಯಕನಹಳ್ಳಿ ಗಾಯತ್ರಿ ಎಂಬುವರ 5.75 ಲಕ್ಷ ಮೌಲ್ಯದ 140 ಗ್ರಾಂ ಬಂಗಾರ ಕಳ್ಳನವಾಗಿದೆ.
ಗಾಯತ್ರಿಯ ಅವರು ಸಂಬಂಧಿಕರ ಮದುವೆ ಕಾರ್ಯಕ್ಕೆ ಬಟ್ಟೆ ತರಲು ಹೋಗಿ ಬಂದು ಬಂಗಾರವನ್ನು ಮನೆ ಬೀರಿನಲ್ಲಿ ಇಟ್ಟಿದ್ದರು. ಮದುವೆ ಕಾರ್ಯಕ್ಕೆ ಹೋಗಲು ಬೀರಿನಿಂದ ಬಂಗಾರದ ಆಭರಣ ತೆಗೆಯಲು ಹೋದಾಗ ಕಳ್ಳತನವಾಗಿರುವುದು ಗೊತ್ತಾಗಿದೆ. ಬಂಗಾರದ ಚೈನ್, ಬ್ರಾಸ್ ಲೈಟ್, ಉಂಗುರ, ಗಟ್ಟಿ ಬಂಗಾರ, ಮಾಂಗಲ್ಯ ಸರ, ಬಳೆ ಸೇರಿ ೊಟ್ಟು 5.75 ಲಕ್ಷ ಮೌಲ್ಯದ ಬಂಗಾರ ಕಳ್ಳತನವಾಗಿದೆ. ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ.