ದಾವಣಗೆರೆ: ನಗರದ ಕೆಟಿಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಖತರ್ನಾಕ್ ಕಳ್ಳರು ಕೈಚಳಕ ತೋರಿದ್ದು, ಲೆನಿನ್ ನಗರದ ಮನೆಯೊಂದರ ಬೀಗ ಮುರಿದು 3.76 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ನರದ ಹೊಸ ನಿಟುವಳ್ಳಿಯ ಲೆನಿನ್ ನಗರ ನಿವಾಸಿಯಾದ ರೇಣುಕಮ್ಮ(46) ತಮ್ಮ ಇಬ್ಬರು ಹೆಣ್ಣು ಮಕ್ಕಳ ಜತೆ ವಾಸವಿದ್ದರು. ಅವರು ಶಿವಮೊಗ್ಗದ ಸಾಗರದ ತಮ್ಮ ಸಬಂಧಿ ಮನೆಗೆ ಮಕ್ಕಳ ಜತೆ ಹೋಗಿದ್ದರು. ಸಾಗರದಿಂದ ಮನೆಗೆ ಬಂದು ನೋಡಿದಾಗ ಮನೆಯ ಬಾಲು ಬೀಗಮುರಿಯಲಾಗಿತ್ತು. ಮನೆ ಒಳಗೆ ಹೋಗಿ ನೋಡಿದ್ದಾಗ ಯಾರೋ ಕಳ್ಳರು ಬೀರುವಿನ ಬೀಗವನ್ನು ಆಯುಧದಿಂದ ಮುರಿದು, ಬೀರಿನಲ್ಲಿದ್ದ 121 ಗ್ರಾಂ ತೂಕದ ಬಂಗಾರ ಹಾಗೂ 440 ಗ್ರಾಂ ತೂಕದ ಬೆಳ್ಳಿ ಆಭರಣ ಸೇರಿ ಒಟ್ಟು 3.76 ಲಕ್ಷ ಮೌಲ್ಯದ ಬೆಳ್ಳಿ, ಬಂಗಾರ ದೋಚಿಕೊಂಡು ಹೋಗಿದ್ದಾರೆ ಎಂದು ರೇಣುಕಮ್ಮ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.



