ದಾವಣಗೆರೆ: ಅಕ್ರಮವಾಗಿ ಮಾರಾಟ ಮಾಡಲು ಸಂಗ್ರಹಿಸಿದ್ದ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇಬ್ಬರು ಆರೋಪಿಗಳನ್ನು ಬಂಧನ ಮಾಡಿದ್ದಾರೆ. ಆರೋಪಿಗಳಿಂದ 60 ಸಾವಿರ ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ.
ದಾವಣಗೆರೆ: ಅಡಿಕೆಗೆ ಭರ್ಜರಿ ಬೆಲೆ; 60 ಸಾವಿರದತ್ತ ಇಂದಿನ ದರ
ಜ.1 ರಂದು ದಾವಣಗೆರೆ ನಗರದ ಕೆಟಿಜೆ ನಗರ ಠಾಣಾ ವ್ಯಾಪ್ತಿಯ ಸರಸ್ವತಿ ನಗರದ ಟ್ಯಾಂಕ್ ಪಾರ್ಕ್ ಒಳಗಡೆ ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಗಾಂಜಾವನ್ನು ಸಂಗ್ರಹಿಸಿಕೊಂಡಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ದಾಳಿ ನಡೆದಿದೆ.
ದಾವಣಗೆರೆ; ಫೆ.24,25 ರಂದು ನಗರ ದೇವತೆ ದುಗ್ಗಮ್ಮ ಜಾತ್ರೆ; ವಿಜೃಂಭಣೆಯಿಂದ ಆಚರಿಸಲು ತೀರ್ಮಾನ
ಡಿವೈಎಸ್ಪಿ ಶರಣಬಸವೇಶ್ವರ ಬಿ ನೇತೃತ್ವದಲ್ಲಿ, ಪೊಲೀಸ್ ನಿರೀಕ್ಷಕರು ಸುನೀಲ್ ಕುಮಾರ್ ಹೆಚ್.ಎಸ್. ಹಾಗೂ ಪೊಲೀಸ್ ಅಧಿಕಾರಿ ಸಿಬ್ಬಂದಿ ದಾಳಿನಡೆದಿದೆ. ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಗಾಂಜಾವನ್ನು ಸಂಗ್ರಹಿಸಿದ್ದ ಆರೋಪಿ 1] ರಾಕೇಶ್, ಕೆ.ಎಲ್., 21 ವರ್ಷ, ಕೆ.ಟಿ.ಜೆ. ನಗರ, ದಾವಣಗೆರೆ. 2] ಖಾಜಾಮೊಹಿದ್ದೀನ್ ಸಾಹಿಲ್ @ ಸಾಹಿಲ್, 23 ವರ್ಷ, ಶ್ರೀರಾಮ ಬಡಾವಣಿ, ದಾವಣಗೆರೆ ಇವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದ್ದು, ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಗಾಂಜಾವನ್ನು ಸಂಗ್ರಹಿಸಿಟ್ಟುಕೊಂಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಭದ್ರಾ ಜಲಾಶಯ; ಜ.3ರಿಂದ ಎಡದಂಡೆ, ಜ.8ರಿಂದ ಬಲದಂಡೆ ನಾಲೆಗೆ ಹರಿಸಲು ತೀರ್ಮಾನ
ಆರೋಪಿಗಳ ಬಳಿ ಇದ್ದ ಸುಮಾರು 60,000 ಮೌಲ್ಯದ 1165 ಗ್ರಾಂ ಗಾಂಜಾ, ಎರಡು ಅರ್ಧ ಚಂದ್ರಾಕೃತಿಯುಳ್ಳ ಕಬ್ಬಿಣದ ಎರಡು ಮಚ್ಚುಗಳು, ಒಟ್ಟು 1500 ರೂ ನಗದು ಹಣ ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರ ಪತ್ತೆ ಕಾರ್ಯ ನಡೆಯುತ್ತಿದೆ.



