Connect with us

Dvgsuddi Kannada | online news portal | Kannada news online

ದಾವಣಗೆರೆ: ಚನ್ನಗಿರಿಯ ಕಾಶೀಪುರ ಕ್ಯಾಂಪ್ ಬಳಿ ಅಕ್ರಮ ಸ್ಫೋಟಕ ವಶ; ಒಬ್ಬನ ಬಂಧನ

ಚನ್ನಗಿರಿ

ದಾವಣಗೆರೆ: ಚನ್ನಗಿರಿಯ ಕಾಶೀಪುರ ಕ್ಯಾಂಪ್ ಬಳಿ ಅಕ್ರಮ ಸ್ಫೋಟಕ ವಶ; ಒಬ್ಬನ ಬಂಧನ

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕಾಶೀಪುರ ಕ್ಯಾಂಪ್ ಬಳಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸ್ಪೋಟಕವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಒಬ್ಬನನ್ನು ಬಂಧಿಸಲಾಗಿದೆ.

ಮಾಹಿತಿ ಆಧಾರಿಸಿ ಸಂತೆಬೆನ್ನೂರು ಪೊಲೀಸರು ದಾಳಿ ನಡೆಸಿದ್ದು, ಚನ್ನಗಿರಿ ತಾಲ್ಲೂಕಿನ ಕಾಶಿಪುರ ಕ್ಯಾಂಪ್ ನ ಸರ್ವೆ ನಂ. 20/6 ರಲ್ಲಿ ಬಂಡೆ ಸ್ಫೋಟಿಸಲು ಅಕ್ರಮವಾಗಿ ಸ್ಪೋಟಕ ಸಂಗ್ರಹಿಸಿದ್ದರು. ಸ್ಪೋಟಕಕ್ಕೆ ಯಾವುದೇ ಪರವಾನಿಗೆ ಪಡೆದಿರಲಿಲ್ಲ. ಖಚಿತ ಮಾಹಿತಿ ಮೇಲೆ ದಾಳಿಯಲ್ಲಿ ನಡೆಸಿದ್ದು, ಈ ವೇಳೆ ಸ್ಪೋಟಕಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

8 ಜಿಲೆಟಿನ್ ಕಡ್ಡಿ, ಎಲೆಕ್ಟ್ರಾನಿಕ್ ಡಿಟೋನೇಟರ್, 30 ಮೀಟರ್ ತಂತಿ, ಮೆಗ್ಗರ್ ಮಿಷನ್, 5ಲೀಟರ್ ಖಾಲಿ ಕ್ಯಾನ್ ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣಕ್ಕೆ ಸಬಂಧಿಸಿದಂತೆ ಆರೋಪಿ ಪರ್ವೇಜ್ ಎಂಬಾತನನ್ನು ಬಂಧಿಸಿರುವ ಪೊಲೀಸರು ಮತ್ತೋರ್ವ ಆರೋಪಿಗೆ ಬಲೆ ಬೀಸಿದ್ದಾರೆ. ಸಂತೆಬೆನ್ನೂರು ಪಿಎಸ್ ಐ ಶಿವರುದ್ರಪ್ಪ ಎಸ್ ಮೇಟಿ ನೇತೃತ್ವದ ತಂಡ ದಾಳಿ ಮಾಡಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಚನ್ನಗಿರಿ

To Top