ದಾವಣಗೆರೆ: ತಾಲ್ಲೂಕಿನ ಶಿರಮಗೊಂಡನಹಳ್ಳಿಯಲ್ಲಿ 112 ಪೊಲೀಸರು ಬಾಲ್ಯ ವಿವಾಹವನ್ನು ತಡೆದಿದ್ದಾರೆ.
ಬಗರ್ ಹುಕುಂ: ಅಕ್ರಮದಲ್ಲಿ ಶಾಮೀಲಾದ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ; ಕಂದಾಯ ಸಚಿವ
ಇಂದು (ಡಿ. 9) ಬೆಳಿಗ್ಗೆ ದಾವಣಗೆರೆ ತಾಲ್ಲೂಕು ಶಿರಮಗೊಂಡನಹಳ್ಳಿ ಗ್ರಾಮದಲ್ಲಿ 17 ವರ್ಷದ ಅಪ್ರಾಪ್ತಳಿಗೆ ವಿವಾಹ ಮಾಡಲು ಸಿದ್ಧತೆ ನಡೆಸಿರುವ ಬಗ್ಗೆ 112 ಗೆ ದೂರು ಬಂದ ಮೇರೆಗೆ 112 ಕರ್ತವ್ಯಾಧಿಕಾರಿಗಳಾದ ನರೇಂದ್ರ ನಾಯ್ಕ್ ಹಾಗೂ ವೀರೇಶ್ ರವರು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದರು.
ಪ್ರತಿ ರೈತರಿಂದ ಮೆಕ್ಕೆಜೋಳ ಖರೀದಿ ಮಿತಿ 20 ಕ್ವಿಂಟಲ್ ನಿಂದ 50 ಕ್ವಿಂಟಲ್ ಗೆ ಹೆಚ್ಚಳ
ನಂತರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹರ್ಷದ್ ಅಲಿ ಜೊತೆಯಲ್ಲಿ ಹಾಗೂ ಪಿಡಿಒ ರವರಾದ ಜಯಲಕ್ಷ್ಮಿ ರವರ ಸಮಕ್ಷಮ ಬಾಲ್ಯ ವಿವಾಹಕ್ಕೆ ಸಿದ್ಧತೆ ನಡೆಸಿದ್ದನ್ನು ತಡೆದು ಬಾಲಕಿಯನ್ನು ರಕ್ಷಿಸಿ, ಅಪ್ರಾಪ್ತ ವಯಸ್ಸಿಗೆ ವಿವಾಹ ಮಾಡುವುದು ಕಾನೂನು ಬಾಹಿರವಾಗಿರುತ್ತದೆಂದು ಅಪ್ರಾಪ್ತಳ ಪೋಷಕರಿಗೆ ಸೂಕ್ತ ತಿಳುವಳಿಕೆ ನೀಡಿ, ಮುಂದಿನ ಕ್ರಮಕ್ಕಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ಕಚೇರಿಗೆ ಪೋಷಕರೊಂದಿಗೆ ಕಳುಹಿಸಿ ಕೊಟ್ಟಿದ್ದಾರೆ.



