ದಾವಣಗೆರೆ: ಆನ್ಲೈನ್ನಲ್ಲಿ ಪ್ರಾಡಕ್ಟ್ಗಳಿಗೆ ರಿವ್ಯೂವ್ ನೀಡಿದ್ರೆ ಕಮಿಷನ್ ನೀಡುವುದಾಗಿ ವ್ಯಕ್ತಿಯೊಬ್ಬರಿಗೆ ಆಮಿಷ ತೋರಿಸಿ 39.36ಲಕ್ಷ ವಂಚಿಸಲಾಗಿದೆ.
ಪ್ರತಿ ರೈತರಿಂದ ಮೆಕ್ಕೆಜೋಳ ಖರೀದಿ ಮಿತಿ 20 ಕ್ವಿಂಟಲ್ ನಿಂದ 50 ಕ್ವಿಂಟಲ್ ಗೆ ಹೆಚ್ಚಳ
ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಸಾಸ್ಟೆಹಳ್ಳಿಯ ಬಟ್ಟೆ ವ್ಯಾಪಾರಿಯೊಬ್ಬರು ಆನ್ಲೈನ್ ಮೂಲಕ ಹಣ ಕಳೆದುಕೊಂಡಿದ್ದಾರೆ. ವಾಟ್ಸಾಪ್ ಮೂಲಕ ಅಪರಿಚಯಿಸಿಕೊಂಡ ಅಪರಿಚಿತ ಆನ್ಲೈನ್ನಲ್ಲಿ ಟಾಸ್ ಕಂಪ್ಲೇಟ್ ಮಾಡಿದರೆ ಲಾಭಾಂಶ ನೀಡುವುದಾಗಿ ಆಸೆ ತೋರಿಸಿದ್ದನು.
ಮೊದಮೊದಲು ನೀಡಿದ ಟಾರ್ಗೆಟ್ ಪೂರ್ಣಗೊಳಿಸಿದ್ದಕ್ಕೆ ಲಾಭಾಂಶ ನೀಡಿದ್ದರು. ಬಳಿಕ ಟಾಸ್ಕ್ ವೇಳೆ ಸೂಚಿಸಿದ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು
ಮೋಸ ಎಸಗಿದ್ದಾರೆ ಎಂದು ಹಣ ಕಳೆದುಕೊಂಡ ವ್ಯಕ್ತಿ ಸೈಬರ್ ಅಪರಾಧ ಪೊಲೀಸ್ ಯಲ್ಲಿ ಪ್ರಕರಣ ದಾಖಲಿಸಿದ್ದಾರೆ.



