ದಾವಣಗೆರೆ: ನಗರದಲ್ಲಿ ಬೈಕ್ ಕಳ್ಳತನ ಮಾಡುತ್ತಿದ್ದ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆರೋಪಿಯಿಂದ 1.60 ಲಕ್ಷ ಮೌಲ್ಯದ 6 ಬೈಕ್ ವಶಕ್ಕೆ ಪಡೆಯಲಾಗಿದೆ.
ಗಾಂಧಿನಗರ ಆಜಾದ್ ನಗರ ಪೊಲೀಸ್ ಠಾಣಾ ದಾಖಲಾಗಿದ್ದ 06 ಬೈಕ್ ಕಳ್ಳತನ ಪ್ರಕರಣಗಳಲ್ಲಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ನಗರ ಉಪ ವಿಭಾಗದ ಡಿವೈಎಸ್ ಪಿ ನರಸಿಂಹ ತಾಮ್ರಧ್ವಜ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಗಜೇಂದ್ರಪ್ಪ ನೇತೃತ್ವದಲ್ಲಿ ಸಿಬ್ಬಂದಿ ಒಳಗೊಂಡ ತಂಡ ಆರೋಪಿ ಮತ್ತು ಬೈಕ್ ಗಳನ್ನು ಪತ್ತೆ ಮಾಡಿದೆ. ಪೊಲೀಸ್ ಕಾರ್ಯಾಚರಣೆಗೆ ಎಸ್ ಪಿ ರಿಷ್ಯಂತ್ ಹಾಗೂ ಹೆಚ್ವುವರಿ ಎಸ್ ಪಿ ಬಸರಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



