ದಾವಣಗೆರೆ: ಮಹಿಳೆಯೊಬ್ಬರು ಮೊಬೈಲ್ ಆಟೋದಲ್ಲಿಯೇ ಬಿಟ್ಟು ಇಳಿದಿದ್ದು, ಅಲ್ಲೇ ಇದ್ದ ದುರ್ಗಾಪಡೆಗೆ ತಕ್ಷಣ ಕಾರ್ಯಾಚರಣೆ ನಡೆಸಿ ಮೊಬೈಲ್ ಪತ್ತೆ ಮಾಡಿ ಮಹಿಳೆಗೆ ಹಸ್ತಾಂತರ ಮಾಡಿದ್ದಾರೆ.
ಗಾಂಧಿನಗರ ಠಾಣಾ ಸರಹದ್ದಿನ ಮೈಲಾರಲಿಂಗೇಶ್ವರ ದೇವಸ್ಥಾನದ ಹತ್ತಿರ ಚಿತ್ರದುರ್ಗದ ಸವಿತಾ ಎಂಬುವವರು ಆಟೋದಲ್ಲಿ ದೇವಸ್ಥಾನಕ್ಕೆ ಬರುವಾಗ ಮೊಬೈಲ್ ಆಟೋದಲ್ಲಿಯೇ ಬಿಟ್ಟು ಇಳಿದುಕೊಂಡಿದ್ದರು. ಬಗ್ಗೆ ಅಲ್ಲಿಯೇ ಗಸ್ತಿನಲ್ಲಿದ್ದ ದುರ್ಗಾಪಡೆಗೆ ಮಾಹಿತಿ ತಿಳಿಸಿದ್ದು, ಕೂಡಲೇ ದುರ್ಗಾಪಡೆ ಅಧಿಕಾರಿಗಳಾದ ಪಿ ಎಸ್ ಐ ಜಯರತ್ನಮ್ಮ ಹಾಗೂ ಸಿಬ್ಬಂದಿಗಳ ತಂಡ ಸದರಿ ಆಟೋವನ್ನು ಪತ್ತೆ ಮಾಡಿ ಮೊಬೈಲ್ ಅನ್ನು ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.



