ದಾವಣಗೆರೆ: ಚಿನ್ನದ ಗಟ್ಟಿ ಕೊಡುವುದಾಗಿ ಕರೆಸಿಕೊಂಡು 2 ಲಕ್ಷ ವಂಚನೆ ಮಾಡಿರುವ ಘಟನೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸಂತೇಬೆನ್ನೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಂತೇಬೆನ್ನೂರು ಸಮೀಪರ ದೊಡ್ಡಬ್ಬುಗೆರೆ ಮತ್ತು ಕೆಬಿ ಗ್ರಾಮ ಮಧ್ಯೆದ ಮಾವಿನ ತೋಟದ ಬಳಿ ಅಪರಿಚಿತ ವ್ಯಕ್ತಿಯೊಬ್ಬ ಚಿನ್ನದ ಗಟ್ಟಿ ಕೊಡುವುದಾಗಿ ವಂಚನೆ ಮಾಡಿದ್ದಾನೆ. ಬೆಂಗಳೂರಿನ ಸಂಕದಕಟ್ಟೆಯ ರಾಗಿ ಮಿಲ್ ಮಾಲೀಕ ಸುರೇಶ್ ವಂಚನೆಗೆ ಒಳಗಾದ ವ್ಯಕ್ತಿಯಾಗಿದ್ದಾರೆ. ಸುರೇಶ್ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಕಾಲ್ ಮಾಡಿ ನಮ್ಮ ಮನೆಯಲ್ಲಿ ಚಿನ್ನದ ಗಟ್ಟಿ ಸಿಕ್ಕಿದೆ. ಇದನ್ನು ಮಾರಾಟ ಮಾಡಬೇಕಿದೆ. ನಿಮಗೆ ಕಡಿಮೆ ಬೆಲೆಗೆ ಕೊಡುತ್ತೇನೆ ಹೇಳಿದ್ಧಾನೆ.
70 ಮಿಲಿ ಅಸಲಿ ಬಂಗಾರವನ್ನು ಸ್ಯಾಂಪಲ್ ಆಗಿ ಸುರೇಶ್ ಗೆ ಅಪರಿಚಿತ ವ್ಯಕ್ತಿ ಕೊಟ್ಟಿದ್ದ, ಇದನ್ನು ನಂಬಿದ ಸುರೇಶ್ 2 ಲಕ್ಷದೊಂದಿಗೆ ಬೆಂಗಳೂರಿನಿಂದ ಸಂತೇಬೆನ್ನೂರು ಸಮೀಪರ ದೊಡ್ಡಬ್ಬುಗೆರೆ ಮತ್ತು ಕೆಬಿ ಗ್ರಾಮ ಮಧ್ಯೆದ ಮಾವಿನ ತೋಟದ ಬಳಿ ಬಂದಿದ್ದಾರೆ. ಆಗ ಅಪರಿಚಿತ ಇಬ್ಬರು ವ್ಯಕ್ತಿಗಳು ಬಂದು ಒಂದುವರೆ ಕೆ.ಜಿ ನಕಲಿ ಬಂಗಾರ ಕೊಟ್ಟಿದ್ದಾರೆ. ಕೊಟ್ಟಿರುವ ಬಂಗಾರ ನಕಲಿಯೋ, ಅಸಲಿಯೋ ಎಂಬುದನ್ನು ಪರೀಕ್ಷೆ ಮಾಡುವಷ್ಟರಲ್ಲಿ ಸುರೇಶ್ ಅವರ ಮೇಲೆ 7 ರಿಂದ 8 ಮಂದಿ ದಾಳಿ ಮಾಡಿ ಮೊಬೈಲ್ ಕಸಿದುಕೊಂಡಿದ್ದಾರೆ. ಆಗ ಹೆದರಿದ ಸುರೇಶ್ ಅಲ್ಲಿಂದ ತಪ್ಪಿಸಿಕೊಂಡು ಬಂದಿದು ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.