ದಾವಣಗೆರೆ: ಒಂಟಿ ಮಹಿಳೆಯ ಮನೆಗೆ ನುಗ್ಗಿ ಹಲ್ಲೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಅಕ್ಟೋಬರ್ 3ರಂದು ಬೆಳಗ್ಗೆ ದಾವಣಗೆರೆ ತಾಲ್ಲೂಕು ಕಾರಿಗನೂರು ಕ್ರಾಸ್ ಗ್ರಾಮದ ವಾಸಿ ದೂರುದಾರ ಉಮಾಪತಿ ಕೆ.ಎಂ ಹೆಂಡತಿ ವೀರಮ್ಮ ಮನೆಯಲ್ಲಿ ಒಬ್ಬರೇ ಇರುವುದನ್ನು ನೋಡಿಕೊಂಡು, ಯಾರೋ ದುಷ್ಕರ್ಮಿಗಳು ಮನೆಗೆ ನುಗ್ಗಿ ತಲೆಗೆ ಹಲ್ಲೆ ಮಾಡಿ, ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರ ಬಗ್ಗೆ ಹದಡಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಗಾಯಾಳು ವೀರಮ್ಮರವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿತರ ಪತ್ತೆ ಬಗ್ಗೆ ತನಿಖೆಯನ್ನು ಕೈಗೊಂಡಿದ್ದು, ಎಸ್ಪಿ ಉಮಾ ಪ್ರಶಾಂತ್ ಘಟನಾ ಸ್ಥಳಕ್ಕೆ ಬೇಟಿ ನೀಡಿ ತನಿಖಾಧಿಕಾರಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಿದ್ದರು.
ಆರೋಪಿ ಮತ್ತು ಮಾಲು ಪತ್ತೆಗಾಗಿ ಡಿವೈಎಸ್‌ಪಿ ಬಿ.ಎಸ್ ಬಸವರಾಜ್, ಸಿಪಿಐ ರಾಘವೇಂದ್ರ ಕೆ.ಎನ್, ಪಿ.ಎಸ್.ಐ ಶ್ರೀಶೈಲ ಪಟ್ಟಣಶೆಟ್ಟಿ, ಅಜ್ಜಪ್ಪ ಎಸ್.ಬಿ ಮತ್ತು ಸಿಬ್ಬಂದಿ ಒಳಗೊಂಡ ವಿಶೇಷ ತಂಡ ರಚನೆ ಮಾಡಿದ್ದು. ಈ ತಂಡವು ಆರೋಪಿ ನವೀನ ಹೆಚ್ ( 27) ಕೂಲಿ ಕೆಲಸ, ಕಾರಿಗನೂರು ಕ್ರಾಸ್ ಗ್ರಾಮ. ಈತನನ್ನು ವಿಚಾರಣೆಗೆ ಒಳಪಡಿಸಿದಾಗ ವೀರಮ್ಮನಿಗೆ ಹಲ್ಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಹೆಚ್ಚಿನ ತನಿಖೆ ಮುಂದುವರೆದಿದೆ.
ಈ ಪತ್ತೆ ಕಾರ್ಯ ನಡೆಸಿದ ತಂಡ, ಬೆರಳಚ್ಚು, ತಜ್ಞರು, ಶ್ವಾನದಳ ಹಾಗೂ ಸೋಕೋ ಅಧಿಕಾರಿಗಳಿಗೆ ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.