ದಾವಣಗೆರೆ: ಕಂಪನಿಗೆ ಹಣ ಹೂಡಿಕೆ ಮಾಡಿದ್ರೆ ಲಾಭಾಂಶ ನೀಡುವುದಾಗಿ ನಂಬಿಸಿ ವಂಚನೆ ಮಾಡಿದ ದಂಪತಿಗೆ 1 ವರ್ಷ ಕಾರಾಗೃಹ ಶಿಕ್ಷೆ ಹಾಗೂ ತಲಾ 30,000 ದಂಡ ವಿಧಿಸಿ 3ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಭಗತ್‌ಸಿಂಗ್ ನಗರದ ಮಾಲತೇಶ್ ಹಾಗೂ ಆತನ ಪತ್ನಿ ಉಷಾ ಕೆ.ಆರ್. ಅಪರಾಧಿಗಳು. 2017ರಲ್ಲಿ ತಮ್ಮ ಕಂಪನಿಗೆ ಬಂಡವಾಳ ಹೂಡಿದರೆ ಶೇ.4ರಷ್ಟು ಲಾಭಾಂಶ ನೀಡುವುದಾಗಿ ನಂಬಿಸಿ, ಮೀನಾಕ್ಷಿ ಷಣ್ಮುಖಪ್ಪ ಅವರಿಂದ 1,50,000 ಮೊತ್ತ ಪಡೆದಿದ್ದರು.
ಹೂಡಿಕೆ ನಂತರ ಲಾಭಾಂಶ ಹಾಗೂ ಬಂಡವಾಳ ಎರಡನ್ನೂ ನೀಡಲಿಲ್ಲ. ಹೂಡಿಕೆ ಮಾಡಿದ ಕಂಪನಿ ಬಗ್ಗೆ ವಿಚಾರಿಸಿದಾಗ, ಅದು ನಷ್ಟದಿಂದ ಸಂಸ್ಥೆ ಮುಚ್ಚಿರುವುದು ಗೊತ್ತಾಗಿದೆ. ಬಹುರಾಷ್ಟ್ರೀಯ ಕಂಪನಿ ಹೆಸರು ಮತ್ತು ಲೋಗೋ ಉಪಯೋಗಿಸಿಕೊಂಡು ಭರ್ಜರಿ ಲಾಭಾಂಶ ನೀಡುತ್ತೇವೆಂದು ಭರವಸೆ ನೀಡಿ ವಂಚಿಸಿದ್ದಾರೆ ಎದು ಬಿ.ಬಡಾವಣೆಯ ಮೀನಾಕ್ಷಿ
ಷಣ್ಮುಖಪ್ಪ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖಾಧಿಕಾರಿ ಪ್ರಭು ಡಿ.ಕೆಳಗಿನಮನಿ ದೋಷಾರೋಪಪಟ್ಟಿ ಸಲ್ಲಿಸಿದ್ದರು.