ದಾವಣಗೆರೆ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಎನ್.ಡಿ.ಪಿ.ಎಸ್ ಕಾಯ್ದೆಯಡಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ ವಶಪಡಿಸಿಕೊಂಡ 12.50 ಲಕ್ಷ ಮೌಲ್ಯದ ಗಾಂಜಾವನ್ನು ನಾಶ ಮಾಡಲಾಯಿತು.
ಘನ ನ್ಯಾಯಾಲದಿಂದ ಡ್ರಗ್ ಡಿಸ್ಪೊಸಲ್ ಕಮಿಟಿ ಮುಖಾಂತರ ಅನುಮತಿ ಪಡೆದ 11 ಪ್ರಕರಣಗಳಿಗೆ ಸಂಬಂಧಿಸಿದಂತೆ 12ಕೆಜಿ 394 ಗ್ರಾಂ (ಅಂದಾಜು ಮೊತ್ತ 12,50,000/- ರೂ ಗಳು) ಗಾಂಜಾವನ್ನು ನಾಶಪಡಿಸಲಾಯಿತು. ದಾವಣಗೆರೆ ಜಿಲ್ಲೆಯ ಪರಿಸರ ಅಧಿಕಾರಿಗಳು ನಿಗಧಿ ಪಡಿಸಿದ ಸ್ಥಳವಾದ ದಾವಣಗೆರೆ ತಾಲ್ಲೂಕು, ಅವರಗೊಳ್ಳ ಗ್ರಾಮದಲ್ಲಿರುವ ದಾವಣಗೆರೆ ಮಹಾನಗರ ಪಾಲಿಕೆ ಘನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಡ್ರಗ್ ಡಿಸ್ಪೊಸಲ್ ಕಮಿಟಿ ಅಧ್ಯಕ್ಷರು, ಎಸ್ಪಿ ಉಮಾ ಪ್ರಶಾಂತ್ ಐಪಿಎಸ್, ಡಿಸ್ಪೊಸಲ್ ಕಮಿಟಿಯ ಸದಸ್ಯರುಗಳಾದ ನಗರ ಡಿವೈಎಸ್ಪಿ ಶರಣಬಸವೇಶ್ವರ ಬಿ, ಸಿಇಎನ್ ಠಾಣೆಯ ಡಿವೈಎಸ್ಪಿ ಬಂಕಾಳಿ ನಾಗಪ್ಪ, ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಹಾಗೂ ಪಂಚರ ಉಪಸ್ಥಿತಿಯಲ್ಲಿ ನಾಶಪಡಿಸಲಾಯಿತು.



