ದಾವಣಗೆರೆ: ನಂಬರ್ ಪ್ಲೇಟ್ ಇಲ್ಲದೆ ಸಂಚಾರಿಸುತ್ತಿದ್ದ 40 ಬೈಕ್ ಗಳಿಗೆ ಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ.
ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ಪರಮೇಶ್ವರ ಹೆಗಡೆ, ಜಿ ಮಂಜುನಾಥ್ ಹಾಗೂ ಡಿವೈಎಸ್ಪಿ ಶರಣಬಸವೇಶ್ವರ ಬಿ ಮಾರ್ಗದರ್ಶನದಲ್ಲಿ ದಾವಣಗೆರೆ ದಕ್ಚಿಣ ಟ್ರಾಫಿಕ್ ಸಿಪಿಐ ನಲವಾಗಲು ಮಂಜುನಾಥ್ ನೇತೃತ್ವದಲ್ಲಿ ಉತ್ತರ ಟ್ರಾಫಿಕ್ ಪಿಎಸ್ಐ ಮತ್ತು ಸಿಬ್ಬಂದಿ ನಂಬರ್ ಪ್ಲೇಟ್ ಇಲ್ಲದೇ ಸಂಚಾರಿಸುವ ಬೈಕ್ ವಶಕ್ಕೆ ಪಡೆಯಲಾಗಿದೆ.
ನಂಬರ್ ಪ್ಲೇಟ್ ರಹಿತ ಬೈಕ್ ಚಾಲನೆ ಮಾಡದಂತೆ ಅರಿವು
ದಾವಣಗೆರೆ ನಗರದಲ್ಲಿ ವಿಶೇಷ ಕಾರ್ಯಚರಣೆ ನಡೆಸಿ ಸುಮಾರು 40 ಕ್ಕೂ ಹೆಚ್ಚು ಬೈಕ್ ಹಿಡಿದು ಹೊಸ ನಂಬರ್ ಪ್ಲೇಟ್ ಗಳನ್ನು ಅಳವಡಿಸಿ ನಂತರ ದಂಡ ವಿಧಿಸಿಸಲಾಯಿತು. ಈ ವೇಳೆ ನಂಬರ್ ಪ್ಲೇಟ್ ರಹಿತವಾಗಿ ವಾಹನ ಚಲಿಸಿದಂತೆ ವಾಹನ ಚಾಲಕ, ಮಾಲೀಕರಿಗೆ ಅರಿವು ಮೂಡಿಸಲಾಯಿತು.



