ದಾವಣಗೆರೆ: ಬಸ್ ನಿಲ್ದಾಣದಲ್ಲಿ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಮಹಿಳಾ ಆರೋಪಿಗಳ ಬಂಧನ; 15 ಲಕ್ಷ ಮೌಲ್ಯದ ಚಿನ್ನಾಭರಣ ವಶ

ದಾವಣಗೆರೆ: ಬಸ್ ಸ್ಟಾಂಡ್ ನಲ್ಲಿ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಅಂತರ ಜಿಲ್ಲಾ ಇಬ್ಬರು ಮಹಿಳಾ ಆರೋಪಿಗಳ ಕೆಟಿಜೆ ನಗರ‌ ಪೊಲೀಸರ ಕ್ಷೀಪ್ರ ಕಾರ್ಯಚರಣೆ ಬಂಧನ ಮಾಡಿದ್ದು, 15 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಸುಧಾ.ಟಿ ಎಂಬುವವರು ಬಸ್ ನಿಲ್ದಾಣದಲ್ಲಿ ಬಸ್ ಹತ್ತುತ್ತಿರುವಾಗ ಸುಮಾರು 15 ತೊಲ ಬಂಗಾರ ಆಭರಣಗಳನ್ನು ಯಾರೋ ಕಳ್ಳರು ದಿನಾಂಕ 25-06-2025 ರಂದು ಕಳ್ಳತನ ಬಗ್ಗೆ ಕೆ.ಟಿ.ಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಚಿತ್ರದುರ್ಗ, ದಾವಣಗೆರೆ ಜಿಲ್ಲೆಯಲ್ಲಿ ಕಳ್ಳತನ

ಈ ಪ್ರಕರಣದ ಆರೋಪಿ ಹಾಗೂ ಮಾಲು ಪತ್ತೆಗಾಗಿ ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿ ಮಂಜುನಾಥ್. ಜಿ. ಹಾಗೂ ಡಿವೈಎಸ್ಪಿ ಶರಣ ಬಸವೇಶ್ವರ.ಬಿ. ಮಾರ್ಗದರ್ಶನದಲ್ಲಿ‌‌ ನಿರೀಕ್ಷಕ ಸುನೀಲ್ ಕುಮಾರ್. ಹೆಚ್.ಎಸ್. ನೇತೃತ್ವದ ಸಿಬ್ಬಂದಿಗಳ ತಂಡವು ಆರೋಪಿಗಳಾದ ಎ1. ಮಂಜುಳಾ. ಆರ್., (32) ಬಟ್ಟೆ ಅಂಗಡಿಯಲ್ಲಿ ಕೆಲಸ ವಾಸ-ದೊಡ್ಡಘಟ್ಟ ಗ್ರಾಮ, ಚನ್ನಗಿರಿ(ತಾ), ಎ2. ಪೂರ್ಣಿಮಾ ಟಿ (20) , ಮನೆ ಕೆಲಸ ವಾಸ-ಅಲವಟ್ಟಿ ರಸ್ತೆ, 9ನೇ ಕ್ರಾಸ್, ಖಾಸಗಿ ಬಸ್ಸ್ ನಿಲ್ದಾಣದ ಹಿಂಭಾಗ ಹೊಳಲ್ಕೆರೆ, ಚಿತ್ರದುರ್ಗ(ಜಿ) ಇವರನ್ನು ವಶಕ್ಕೆ ಪಡೆಯಲಾಗಿದೆ.

ಆರೋಪಿತರನ್ನು ಕೂಲಂಕುಷವಾಗಿ ವಿಚಾರಣೆ ಮಾಡಿದಾಗ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಕಳ್ಳತನ ಮತ್ತು ಬಡಾವಣೆ ಠಾಣೆ ಕಳ್ಳತನವಾದ 44 ಗ್ರಾಂ ಬಂಗಾರದ ಆಭರಣಗಳು ಸೇರಿ ಒಟ್ಟು ಅಂದಾಜು 15,00,000 ಲಕ್ಷ ರೂ. ಬೆಲೆ ಬಾಳುವ ಒಟ್ಟು 155 ಗ್ರಾಂ. ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳ ಹಿನ್ನೆಲೆ

ಆರೋಪಿ ಮಂಜುಳಾ ಹಾಗೂ ಪೂರ್ಣಿಮ ಮೇಲೆ ದಾವಣಗೆರೆ ರೇಲ್ವೇ ಪೊಲೀಸ್ ಠಾಣೆಯಲ್ಲಿ 01, ಚಿತ್ರದುರ್ಗ ಕೋಟೆ ಪೊಲೀಸ್ ಠಾಣೆಯಲ್ಲಿ 1, ಹೊಳಲ್ಕೇರೆ ಠಾಣೆಯಲ್ಲಿ 01, ದಾವಣಗೆರೆ ಬಡಾವಣೆ ಠಾಣೆಯಲ್ಲಿ 01 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾರೆ. ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ತಂಡಕ್ಕೆ ಎಸ್ಪಿ ಉಮಾಪ್ರಶಾಂತ್ ಶ್ಲಾಘಿಸಿದ್ದಾರೆ.

Dvgsuddi: ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Related Post
Recent Posts