ದಾವಣಗೆರೆ: ಆನ್ ಲೈನ್ ಗೇಮ್ ನಿಂದ 18 ಲಕ್ಷ ಕಳೆದುಕೊಂಡಿದ್ದ ಯುವಕ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಾವಣಗೆರೆಯ ಸರಸ್ವತಿ ನಗರದ ಶಶಿ ಕುಮಾರ್ (25) ಮೃತ ಯುವಕನಾಗಿದ್ದಾನೆ.
ಆನ್ ಲೈನ್ ಗೇಮ್ ನಿಷೇಧಕ್ಕೆ ಆಗ್ರಹಿದ ಯುವಕ
ಆನ್‌ಲೈನ್ ಗೇಮ್‌ನ ಗೀಳಿನಿಂದಾಗಿ ಶಶಿಕುಮಾರ್ ಬರೋಬ್ಬರಿ 18 ಲಕ್ಷ ಹಣ ಕಳೆದುಕೊಂಡಿದ್ದ. ಇದರಿಂದ ನೊಂದು ಆನ್ ಲೈನ್ ಗೇಮ್ ನಿಷೇಧ ಮಾಡುವಂತೆ ಅಗ್ರಹಿಸಿ ಪಿಎಂ, ಸಿಎಂ, ಡಿಸಿ ಹಾಗೂ ಎಸ್ಪಿಗೆ ಮನವಿ ಮಾಡಿಕೊಂಡಿದ್ದನು. ಈ ಬಗ್ಗೆ ಸೆಲ್ಫಿ ವೀಡಿಯೋ ಮಾಡಿ ನೋವು ಹೇಳಿಕೊಂಡಿದ್ದನು. ಡೆತ್ ನೋಟ್ ನಲ್ಲಿ ಆನ್ ಲೈನ್ ಗೇಮ್ ನಿಷೇಧ ಮಾಡುವಂತೆ ದಾವಣಗೆರೆ ಸಂಸಸೆ ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಆಗ್ರಹಿಸಿದ್ದಾನೆ.
ವಿಡಿಯೋದಲ್ಲಿ ಎಸ್ಪಿ ಡಿಸಿ ಯವರಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ನನ್ನಂತೆ ಹಣ ಕಳೆದುಕೊಂಡು ನೋವು ಅನುಭವಿಸುವುದು ಕಡಿಮೆಯಾಗಲಿ ಎಂದು ಹೇಳಿಕೊಂಡಿದ್ದಾನೆ.