Connect with us

Dvgsuddi Kannada | online news portal | Kannada news online

ಮನೆ, ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ ; 1.60 ಲಕ್ಷ ಬೆಲೆಯ 6 ಬೈಕ್,‌ ನಗದು ವಶ

davangere dvg

ದಾವಣಗೆರೆ

ಮನೆ, ಬೈಕ್ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ ; 1.60 ಲಕ್ಷ ಬೆಲೆಯ 6 ಬೈಕ್,‌ ನಗದು ವಶ

ದಾವಣಗೆರೆ: ಮನೆ, ಬೈಕ್ ಕಳ್ಳತನ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದು,1.60 ಲಕ್ಷ ರೂ ಬೆಲೆಯ 6 ಬೈಕ್,  60 ಸಾವಿರ ನಗದು ಹಣವನ್ನು ವಶಕ್ಕೆ ಪಡೆದಿದ್ದಾರೆ.

ದೇವರ ಹಟ್ಟಿ ಗ್ರಾಮ, ಮಲ್ಲಿಕ್ ರಿಹಾನ್ ಠಾಣೆಗೆ ಹಾಜರಾಗಿ ದಿನಾಂಕ:21/06/2025 ರಂದು ರಾತ್ರಿ ಸಮಯದಲ್ಲಿ ಯಾರೋ ಕಳ್ಳರು ಮನೆಯ ಒಳಗೆ ಪ್ರವೇಶ ಮಾಡಿ ಗಾಡ್ರೇಜ್ ಬೀರು ನಲ್ಲಿಟ್ಟಿದ್ದ 60,000/- ರೂ ನಗದು ಹಣ ಮತ್ತು ಒಂದು ಮೊಬೈಲ್ ಪೋನ್ ಅನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳ್ಳರನ್ನು ಪತ್ತೆ ಮಾಡಿಕೊಡಿ ಎಂದು ಪ್ರಕರಣ ದಾಖಲಿಸಿದ್ದರು.

ಎಎಸ್ಪಿ ಜಿ. ಮಂಜುನಾಥ, ಡಿವೈಎಸ್ಪಿ ಬಿ.ಎಸ್ ಬಸವರಾಜ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ಠಾಣೆಯ ಪಿ.ಐ ಕಿರಣ್ ಕುಮಾರ್ ನೇತೃತ್ವದಲ್ಲಿ ಪಿಎಸ್‌ಐ ಜೋವಿತ್ ರಾಜ್ ಹಾಗೂ ಸಿಬ್ಬಂದಿ ನಾಗಭೂಷಣ್, ಮಹಮ್ಮದ್‌ಯುಸುಫ್ ಅತ್ತಾರ್, ವೀರೇಶ್ ಪಿ.ಎಂ, ಹನುಮಂತಪ್ಪ ಇವರೊಂದಿಗೆ ಆರೋಪಿ ಆಸಿಫ್ ಖಾನ್ @ ಫಟ್ಕಾ, ಎಂ ಸಿಸಿ ಎ ಬ್ಲಾಕ್, ದಾವಣಗೆರೆ ಮತ್ತು ಇಬ್ಬರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆಯಲಾಗಿದೆ.

ಮನೆಯಲ್ಲಿ ಕಳವು ಮಾಡಿದ್ದ 60,000 ರೂ ನಗದು ಹಣ ಮತ್ತು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನಲ್ಲಿ ಕಳುವಾಗಿದ್ದ 01 ಬೈಕ್, ಹಾಗೂ ಬಡಾವಣೆ ಠಾಣಾ ಸರಹದ್ದಿನಲ್ಲಿ ಕಳವು ಮಾಡಿದ್ದ 03 ದ್ವಿ ಚಕ್ರ ವಾಹನಗಳು ಮತ್ತು ಗಾಂಧಿನಗರ ಪೊಲೀಸ್ ಠಾಣಾ ಸರಹದ್ದಿನ 01 ಬೈಕ್, ಕೆಟಿಜೆ ನಗರ ಪೊಲೀಸ್ ಠಾಣೆಯ 01 ಬೈಕ್. ಒಟ್ಟು ಬೆಲೆ 1,60,000/- ರೂ ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅಪ್ರಾಪ್ತ ಬಾಲಕರನ್ನು ರಿಮ್ಯಂಡ್ ಹೋಮ್ ಗೆ ಕಳಿಸಲಾಗಿರುತ್ತದೆ. ಪತ್ತೆ ಕಾರ್ಯದಲ್ಲಿ ಭಾಗಿಯಾದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top