ದಾವಣಗೆರೆ: ಬಸ್ ಸ್ಟ್ಯಾಂಡ್ ನಲ್ಲಿ ಕಳೆದುಕೊಂಡಿದ್ದ 30 ಗ್ರಾಂ ಬಂಗಾರದ ಮಾಂಗಲ್ಯದ ಸರ ಮತ್ತು ಒಂದು ಉಂಗುರವಿರುವ ಪರ್ಸ್ ಅನ್ನು ಪತ್ತೆ ಹಚ್ಚಿ ವಾರಸುದಾರರಿಗೆ ಕೆಟಿಜೆ ನಗರ ಪೊಲೀಸರು ಹಸ್ತಾಂತರಿಸಿದ್ದಾರೆ.
ಮೇ. 01 ರಂದು ಮಧ್ಯಾಹ್ನ ಚನ್ನಗಿರಿ ತಾಲ್ಲೂಕಿನ ತಣ್ಣಿಗೆರೆ ಗ್ರಾಮದ ಚೈತ್ರ ಎಂಬುವವರು ದಾವಣಗೆರೆ ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ 30 ಗ್ರಾಂ ಬಂಗಾರದ ಮಾಂಗಲ್ಯದ ಸರ ಮತ್ತು ಒಂದು ಉಂಗುರವಿರುವ ಪರ್ಸ್ ಕಳೆದುಕೊಂಡಿದ್ದರು.
ಸಿಸಿ ಟಿವಿ ದೃಶ್ಯಾವಳಿ ಪರಿಶೀಲಿಸಿ ಪತ್ತೆ
ಈ ಬಗ್ಗೆ ಕೆಟಿಜೆ ನಗರ ಠಾಣೆಯಲ್ಲಿ ದೂರು ದಾಖಲಿಸುದ್ದರು.ಕೂಡಲೇ ಕಾರ್ಯ ಪ್ರವೃತ್ತರಾದ ಕೆಟಿಜೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್.ಹೆಚ್.ಎಸ್ ನೇತೃತ್ವದ ಪಿ.ಎಸ್.ಐ ಲತಾ.ಆರ್. ಹಾಗು ಸಿಬ್ಬಂದಿಗಳನ್ನು ಒಳಗೊಂಡ ತಂಡವು, ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಕಾಣೆಯಾಗಿದ್ದ ಸುಮಾರು 30 ಗ್ರಾಂ ಚಿಬ್ಬದ ಮಾಂಗಲ್ಯ ಸರ ಮತ್ತು ಒಂದು ಉಂಗುರವಿರುವ ಪರ್ಸ್ ನ್ನು ಪತ್ತೆ ಹಚ್ಚಿದ್ದಾರೆ.
ಎಸ್ಪಿ ಪ್ರಶಂಸೆ
ಪತ್ತೆ ಮಾಡಿದ ಮಾಲನ್ನು ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ ಎಂ ಸಂತೋಷ ಹಾಗೂ ನಗರ ಡಿವೈಎಸ್ಪಿ ಶರಣಬಸವೇಶ್ವರ ಬಿ ಉಪಸ್ಥಿತಿಯಲ್ಲಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು ಈ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಾದ ಸುರೇಶ್ ಬಾಬು, ಮಹಮದ್ ರಫಿಗಿರೀಶ್ ಗೌಡ, ಸಿದ್ದಪ್ಪ, ನಾಗರಾಜ. ಡಿ.ಬಿ. ಮಾರುತಿ, ಸಂಪತ್ ನಾಯ್ಕ ಅವರನ್ನು ಎಸ್ಪಿ ಉಮಾಪ್ರಶಾಂತ್ ಪ್ರಶಂಸಿದ್ದಾರೆ.



