ದಾವಣಗೆರೆ: ಸಿಗ್ನಲ್ ಜಂಪ್ ಮಾಡಿ ಸ್ಕೂಟಿಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ.
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿಯ ಪಿ.ಬಿ.ರಸ್ತೆಯಲ್ಲಿ ಈ ಘಟನೆ ನಡೆದಿದೆ. ಹರಿಹರ ಪಟ್ಟಣದ ನಿವಾಸಿ ಮೈಕಲ್ ಕುಮಾರ್ (22) ಮೃತಪಟ್ಟ ಯುವಕನಾಗಿದ್ದಾನೆ. ಹಿಂಬದಿ ಸವಾರ ಸಹ ಗಾಯಗೊಂಡಿದ್ದಾನೆ.ಸ್ಕೂಟಿಯಲ್ಲಿ ಹರಿಹರದಿಂದ ದಾವಣಗೆರೆಗೆ ಬರುವಾಗ ಜಿಲ್ಲಾಧಿಕಾರಿ ಕಚೇರಿ ಬಳಿಯ ಟ್ರಾಫಿಕ್ ಸಿಗ್ನಲ್ ಬಳಿ ಅಪಘಾತ ಸಂಭವಿಸಿದೆ.
ಸಿಗ್ನಲ್ ಜಂಪ್ ಜೀರಾಗಿ ಸಾಗುತ್ತಿದ್ದಾಗ ಮಿನಿ ಗೂಡ್ಸ್ ವಾಹನಕ್ಕೆ ಹಿಂಬದಿಯಿಂದ ಸ್ಕೂಟಿ ಡಿಕ್ಕಿ ಹೊಡೆದಿದೆ. ದಾವಣಗೆರೆ ಉತ್ತರ ವಲಯದ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.