ದಾವಣಗೆರೆ: ಮನೆಯವರು ಕುಟುಂಬ ಸಮೇತರಾಗಿ ಧರ್ಮಸ್ಥಳಕ್ಕೆ ಪ್ರವಾಸ ಹೋಗಿದ್ದ ಸಂದರ್ಭದಲ್ಲಿ ಕಳ್ಳರು, ಮನೆ ಬೀಗ ಮುರಿದು 41.25 ಲಕ್ಷ ಮೌಲ್ಯದ ಒಡವೆ, ನಗದು ಕಳ್ಳತನ ಮಾಡಿದ ಘಟನೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ನಡೆದಿದೆ.
ಹೊನ್ನಾಳಿಯ ಗಂಗಾ ಸಾಮಿಲ್ ಹಿಂಭಾಗದ ‘ಹರಿಹರ ಕೃಪಾ’ ಎಂಬ ಮನೆಯ ಮಾಲೀಕ ಚೆನ್ನೇಗೌಡ ಕುಟುಂಬ ಸಮೇತರಾಗಿ ಧರ್ಮಸ್ಥಳಕ್ಕೆ ಹೋಗಿದ್ದರು. ಈ ವೇಳೆ ತಮ್ಮ ಮನೆ ಮೇಲೆ ವಾಸವಿದ್ದ ಕುಮಾರ್ ಎಂಬುವರಿಗೆ ಹೇಳಿ ಹೋಗಿದ್ದರು. ಏ. 04 ರಂದು ಕುಮಾರ್ ಚೆನ್ನೇಗೌಡರಿಗೆ ಕರೆ ಮಾಡಿ ನಿಮ್ಮ ಮನೆ ಬಾಗಿಲು ತೆರೆದಿದೆ ಎಂದು ಹೇಳಿದರು. ತಕ್ಷಣ ಚೆನ್ನೇಗೌಡ ಧರ್ಮಸ್ಥಳದಿಂದ ವಾಪಸ್ ಬಂದು ನೋಡಿದ್ದಾಗ ಮನೆಯಲ್ಲಿದ್ದ 550 ಗ್ರಾ ತೂಕದ ಬಂಗಾರ, 17.40 ಲಕ್ಷ ನಗದು ಕಳ್ಳತನವಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಚನ್ನೇಗೌಡ ಮೂಲತಃ ಹಾಸನದವರಾಗಿದ್ದು ಹೊನ್ನಾಳಿ ಪಟ್ಟಣದಲ್ಲಿ 20 ವರ್ಷಗಳದ ಎಸ್ ಎಲ್ ವಿ ಬೇಕರಿ ನಡೆಸುತ್ತಿದ್ದರು. ಕಾರಣಾಂತರಗಳಿಂದ ಮೂರು ತಿಂಗಳಿಂದ ಬೇಕರಿ, ಮನೆ ಮಾಡಿದ್ದರು. ಮುಂಗಡವಾಗಿ ಕೊಟ್ಟಿದ್ದ 17.40 ಲಕ್ಷ ನಗದು, 550 ಗ್ರಾಂ ಬಂಗಾರ ಮನೆಯಲ್ಲಿಟ್ಟು ಪ್ರವಾಸ ಹೋಗಿದ್ದರು.



