ದಾವಣಗೆರೆ: ಮಹಿಳೆಯ ಸರಗಳ್ಳತನ ಮಾಡಿದ್ದ ಆರೋಪಿಯನ್ನು ಜಿಲ್ಲಾ ಪೊಲೀಸರು ಬಂಧನ ಮಾಡಿದ್ದಾರೆ.
ಜನವರಿ 26 ರಂದು ಬೆಳಗಿನಜಾವ ಮಲೇಬೆನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೊಕ್ಕನೂರು ಗ್ರಾಮದ ಮಲ್ಲಮ್ಮ (60) ಕೊರಳಲ್ಲಿದ್ದ 37 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋಗಿದ್ದು, ಈ ಬಗ್ಗೆ ಮಲೇಬೆನ್ನೂರು ಪೊಲೀಸ್ ಠಾಣಯಲ್ಲಿ ಪ್ರಕರಣ ದಾಖಲಾಗಿತ್ತು.
ದಾವಣಗೆರೆ: ಅಡಿಕೆಗೆ ಭರ್ಜರಿ ಬೆಲೆ; ಫೆ.17ರ ಅಡಿಕೆ ಧಾರಣೆಯಲ್ಲಿ ಕನಿಷ್ಠ, ಗರಿಷ್ಠ ರೇಟ್ ಎಷ್ಟು..?
ಆರೋಪಿ ಪತ್ತೆಗಾಗಿ ಎಸ್ಪಿ ಉಮಾ ಪ್ರಶಾಂತ, ಎಎಸ್ಪಿ ವಿಜಯಕುಮಾರ್ ಎಂ ಸಂತೋಷ, ಜಿ. ಮಂಜುನಾಥ, ಡಿವೈಎಸ್ಪಿ ಬಸವರಾಜ್ ಬಿ.ಎಸ್ ರವರ ಮಾರ್ಗದರ್ಶನದಲ್ಲಿ ಹಾಗೂ ಹರಿಹರ ವೃತ್ತ ನಿರೀಕ್ಷಕರಾದ ಶ್ರೀ ಸುರೇಶ ಸಗರಿ ಮತ್ತು ಪಿ.ಎಸ್.ಐ ಪ್ರಭು ಡಿ ಕೆಳಗಿನಮನಿ ಮಲೇಬೆನ್ನೂರು ನೇತೃತ್ವದಲ್ಲಿ ಆರೋಪಿಯ ಪತ್ತೆಗಾಗಿ ತಂಡವನ್ನು ರಚಿಸಲಾಗಿದೆ.
ಎಸ್ಪಿ ಉಮಾ ಪ್ರಶಾಂತ, ಕೊಕ್ಕನೂರು ಗ್ರಾಮಕ್ಕೆ ಭೇಟಿ ನೀಡಿ ಜನಸಂಪರ್ಕ ಸಭೆ ನಡೆಸಿ ಸಭೆಯಲ್ಲಿ ಆರೋಪಿತನನ್ನು ಪತ್ತೆ ಹಚ್ಚಿ ಪ್ರಕರಣದ ಬೇದಿಸುತ್ತೆವೆ ಅಂತ ವಾಗ್ದಾನ ನೀಡಿದ ಕೆಲವೇ ದಿನಗಳಲ್ಲಿ ಹರಿಹರ ವೃತ್ತ ನಿರೀಕ್ಷಕ ಸುರೇಶ ಸಗರಿ ತನಿಖೆ ಕೈಗೊಂಡು, ಮಲೇಬೆನ್ನೂರು ಪೊಲೀಸ್ ಠಾಣೆಯ ಪಿ.ಎಸ್.ಐ ಪ್ರಭು ಡಿ ಕೆಳಗಿನಮನಿ ಮಾರ್ಗದರ್ಶನ ನೀಡಿ ದಿನಾಂಕ: 16/02/2025 ರಂದು ಆರೋಪಿ ವಿರೇಶಚಾರಿ (38) ಕೊಕ್ಕನೂರು ಗ್ರಾಮ ಈತನನ್ನು ಬಂಧನ ಮಾಡಲಾಗಿದೆ. ಆರೋಪಿಯಿಂದ ಒಟ್ಟು 37 ಗ್ರಾಂ ತೂಕದ ಅಂದಾಜು ಬೆಲೆ 2,00,000/- ಸ್ವತ್ತು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸಾರ್ವಜನಿಕರ ಗಮನಕ್ಕೆ: ಸಾರ್ವಜನಕರಿಗೆ ಈ ಮೂಲಕ ಜಿಲ್ಲಾ ಪೊಲೀಸ್ ವತಿಯಿಂದ ತಿಳಿಯಪಡಿಸುವುದೇನೆಂದರೆ- ಸಾರ್ವಜನಿಕರು ವಿಶೇಷವಾಗಿ ಮಹಿಳೆಯರು, ಯುವತಿಯರು ಮನೆಯಿಂದ ಹೊರಗಡೆ ಸುತ್ತಾಡುವಾಗ ಸರಗಳ್ಳರ ಬಗ್ಗೆ ಎಚ್ಚರ ವಹಿಸಬೇಕು, ಅಪರಚಿತ ವ್ಯಕ್ತಿಗಳು ಅಡ್ರೆಸ್ ಕೇಳುವ / ಇತರೆ ಯಾವುದೇ ವಿಚಾರವನ್ನು ಇಟ್ಟುಕೊಂಡು ನಿಮ್ಮ ಬಳಿ ಮಾತಾನಾಡುವಾಗ ಅವರಿಂದ ಅಂತರ ಕಾಯ್ದುಕೊಳ್ಳಬೇಕು.ಒಂಟಿಯಾಗಿ ಓಡಾಡುವಾಗ ಆಭರಣಗಳ ಬಗ್ಗೆ ಹಾಗೂ ಅಪರಚಿತ ವ್ಯಕ್ತಿಗಳ ಬಗ್ಗೆ ಹೆಚ್ಚು ಜಾಗ್ರತೆ ವಹಿಸಬೇಕು. ವಾಯು ವಿಹಾರಕ್ಕೆ ಒಡಾಡುವಾಗ ಒಬ್ಬೋಬ್ಬರೆ ಇರಬಾರದು ಹಾಗೂ ಆಭರಣಗಳನ್ನು ಹೆಚ್ಚಾಗಿ ಧರಿಸದೇ ಇರುವುದು ಒಳಿತು. ಸರಗಳ್ಳತನವಾದರೆ/ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದೆ ಕೂಡಲೇ 112 ಕ್ಕೆ ಕರೆ ಮಾಡಬೇಕಿದೆ.



