ದಾವಣಗೆರೆ: ಬೇಕರಿಯಲ್ಲಿ ಖರೀಸಿದಿಸಿದ 115 ರೂ. ಹಣ ಕೇಳಿದ್ದಕ್ಕೆ ಕುಪಿತಗೊಂಡ ವ್ಯಕ್ತಿ, ಬೇಕರಿ ಮಾಲೀಕನಿಗೆ ಚಾಕುವಿನಿಂದ ಇರಿದ ಘಟನೆ ನಗರದ ಬೇತೂರು ರಸ್ತೆಯಲ್ಲಿಂದು(ಫೆ.17) ನಡೆದಿದೆ.
ದಾವಣಗೆರೆ: ಅಡಿಕೆಗೆ ಭರ್ಜರಿ ಬೆಲೆ; ಫೆ.17ರ ಅಡಿಕೆ ಧಾರಣೆಯಲ್ಲಿ ಕನಿಷ್ಠ, ಗರಿಷ್ಠ ರೇಟ್ ಎಷ್ಟು..?
ಬೇಕರಿ ಮಾಲೀಕ ಸಿದ್ದೇಶ್ (40) ಗಾಯಗೊಂಡ ವ್ಯಕ್ತಿಯಾಗಿದ್ದು, ಮಂಜುನಾಥ್ ಚಾಕು ಇರಿದ ವ್ಯಕ್ತಿ. ಬೇತೂರು ರಸ್ತೆಯ 5ನೇ ತಿರುವಿನಲ್ಲಿ ಸಿದ್ದೇಶ್ ಎಂಬುವವರ ಬೇಕರಿಗೆ ಮಂಜುನಾಥ್ ಬಂದಿದ್ದಾನೆ. ಈ ವೇಳೆ 115 ರೂಪಾಯಿ ಮೌಲ್ಯದ ತಿನಿಸುಗಳನ್ನು ಖರೀದಿ ಅಂಗಡಿಯಿಂದ ತೆರಳಿದ್ದಾನೆ. ಆಗ ಅಂಗಡಿ ಮಾಲೀಕ ಹಣ ಕೇಳಿದ್ದಕ್ಕೆ ಕುಪಿತಗೊಂಡು ಮಂಜುನಾಥ್, ಸಿದ್ದೇಶ್ ಗೆ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದಾವಣಗೆರೆ: ಪ್ರಾಮಾಣಿಕತೆ ಮೆರೆದ ಆಟೋ ಚಾಲಕ; ಪೊಲೀಸರಿಂದ ಪ್ರಶಂಸೆ
ಈ ಬಗ್ಗೆ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ಮುಂದುವರೆದಿದೆ.



