ದಾವಣಗೆರೆ: ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ನಡೆದುಕೊಂಡು ಹೋಗುತ್ತಿದ್ದ ಮಹಿಯರನ್ನು ಡ್ರಾಪ್ ಕೊಡುವ ನೆಪದಲ್ಲಿ ಬೈಕ್ ಹತ್ತಿಸಿಕೊಂಡು, ಮಾಂಗಲ್ಯ ಸರ ಕಿತ್ಕೊಂಡು ಪರಾರಿಯಾಗುತ್ತಿದ್ದ ಸರಗಳ್ಳನನ್ನು ಬೈಕ್ ನಿಂದು ಹಿಡಿದು ಎಳೆದ ಕೂಲಿ ಕಾರ್ಮಿಕರು ಮಹಿಳೆಯರು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಕಾಕನೂರು ಗ್ರಾಮದಲ್ಲಿ ಈಘಟನೆ ನಡೆದಿದೆ. ಡ್ರಾಪ್ ಕೊಡುವ ನೆಪದಲ್ಲಿ ಬೈಕ್‌ನಲ್ಲಿ ಮಹಿಳೆಯೊಬ್ಬರನ್ನು ಕೂರಿಸಿಕೊಂಡು ಸ್ವಲ್ಪ ದೂರ ಬಂದ ನಂತರ ಮಹಿಳೆ ಕೊರಳಲ್ಲಿದ್ದ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ ಇಬ್ಬರಲ್ಲಿ ಒಬ್ಬ ಸರಗಳ್ಳನನ್ನು ಕೂಲಿ ಕಾರ್ಮಿಕ ಮಹಿಳೆಯರು ಹಿಡಿದಿದ್ದಾರೆ.
ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ರತ್ನಮ್ಮ, ಗೌರಮ್ಮ ಹಾಗೂ ಶಾಂತಮ್ಮ ಮೂಟೆ ಹೊತ್ತು ಕಾಲ್ನಡಿಗೆಯಲ್ಲಿ ಸಾಗುತ್ತಿದ್ದರು. ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು, ಊರವರೆಗೆ ಡ್ರಾಪ್ ನೀಡುವುದಾಗಿ ಹೇಳಿದ್ದರಿಂದ ರತ್ನಮ್ಮ ಮಾತ್ರ ಬೈಕ್ ಹತ್ತಿದ್ದಾರೆ. ಸ್ವಲ್ಪ ದೂರ ಸಾಗಿದ ನಂತರ ಅಪರಿಚಿತರು ರತ್ನಮ್ಮ ಅವರನ್ನು ಬೈಕ್‌ನಿಂದ ಇಳಿಸಿ, ಕೊರಳಲ್ಲಿದ್ದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಆಗ. ಬೈಕ್ ನ ಹಿಂಬದಿ ಕುಳಿತಿದ್ದವನ್ನು ಹಿಡಿದಿ ಎಳೆದ್ದು, ಇನ್ನೊಬ್ಬ ಕಳ್ಳ 2.50 ಲಕ್ಷ ಮೌಲ್ಯದ 40 ಗ್ರಾಂ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಸರ ಕಳೆದುಕೊಂಡ ಮಹಿಳೆ, ಜತೆಯಲ್ಲಿದ್ದ ಕೂಲಿ ಕಾರ್ಮಿಕಮಹಿಳೆಯರು ಕಳ್ಳನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳ್ಳ ತಪ್ಪಿಸಿಕೊಳ್ಳು ಕಲ್ಲಿನಿಂದ ಮಹಿಳೆತರ ಮೇಲೆ ಹಲ್ಲೆ ಮಾಡಿದ್ದು, ಮಹಿಳೆಯರಿಗೆ ತಲೆಗೆ ಗಾಯವಾಗಿವೆ.
ಬಂಧಿತನನ್ನು ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕು ಮಾದನಾಯಕನಹಳ್ಳಿ ಗ್ರಾಮದ ಸುರೇಶ ಆಗಿದ್ದು, ಸರ ಕಿತ್ತುಕೊಂಡು ಪರಾರಿಯಾಗಿರುವ ವ್ಯಕ್ತಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕು ಕನ್ನಗುಂದಿ ಗ್ರಾಮದ ಸೋಮಶೇಖರ ಎಂದು ಬಂಧಿತ ಮಾಹಿತಿ ನೀಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ತಿಳಿಸಿದ್ದಾರೆ. ಸಂತೇಬೆನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



