ದಾವಣಗೆರೆ: ದೇವಸ್ಥಾನದ (Temple) ಹುಂಡಿ ಕಳ್ಳತನ ಮಾಡಲು ಬಂದಿದ್ದ ಮೂವರು ಆರೋಪಿಗಳನ್ನು (Accused) ಜಿಲ್ಲೆಯ ಜಗಳೂರು ಠಾಣಾ ವ್ಯಾಪ್ತಿಯ 112 ಹೊಯ್ಸಳ ಪೊಲೀಸರು (hoysala police) ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಜ.27ರಂದು ಹೊಯ್ಸಳ ಉಸ್ತುವಾರಿ ಅಧಿಕಾರಿ ಮಂಜುನಾಥ ಪ್ರಸಾದ್ ಎ ಮತ್ತು ಚಾಲಕ ಹಾಲೇಶ್ ರಾತ್ರಿ 11:00 ಸುಮಾರಿಗೆ ಅಣಬೂರು ಗೊಲ್ಲರಹಟ್ಟಿಯಲ್ಲಿ ದೂರು ಕರೆ ಬಂದ ಮೇರೆಗೆ ಅಲ್ಲಿಗೆ ಭೇಟಿ ನೀಡಿ ಬರುತ್ತಿದ್ದರು. ಈ ಸಮಯದಲ್ಲಿ ಅಣಬೂರು ಗ್ರಾಮದ ಆಂಜನೇಯ ಸ್ವಾಮಿ ದೇವಾಸ್ಥಾನದ ಹುಂಡಿ ಕಳ್ಳತನ ಮಾಡಲು ಕಳ್ಳರು ಬಂದಿರುವ ಬಗ್ಗೆ 112ಹೊಯ್ಸಳಕ್ಕೆ ಕರೆ ಬಂದಿದ್ದು , ಅಲ್ಲೇ ಇದ್ದ ಅಧಿಕಾರಿಗಳು ತಕ್ಷಣ ಕಾರ್ಯ ಪ್ರವೃತ್ತರಾಗಿ 2-3 ನಿಮಿಷದಲ್ಲಿ ಅಣಬೂರು ಊರ ಹೊರಗಿನ ಆಂಜನೇಯ ದೇವಸ್ಥಾನದ ಬಳಿ ಹೋಗಿದ್ದಾರೆ.
ಈ ವೇಳೆ ದೇವಸ್ಥಾನದ ಹುಂಡಿಯನ್ನು ಹೊಡೆಯುತ್ತಿದ್ದ ಮೂರು ಜನ ಆರೋಪಿತರಲ್ಲಾ ತಪ್ಪಿಸಿಕೊಳ್ಳೊದಕ್ಕೆ ಪ್ರಯತ್ನಿಸಿದ್ದು, ಒಟ್ಟು ಮೂರು ಆರೋಪಿತರನ್ನು ಹಿಡಿದಿದ್ದು, ಕೃತ್ಯವೆಸಗಲು ಬಳಸಿದ್ದ ಬೈಕ್ ಹಾಗೂ ಹುಂಡಿಯನ್ನು ಹೊಡೆಯಲು ತಂದಿದ್ದ ಒಂದು ಕಬ್ಬಿಣದ ರಾಡ್ ಮತ್ತು ಒಂದು ಹುಳಿ ಒಂದು ಸ್ಕ್ರೂ ಡ್ರೈವರ್ ವಶಪಡಿಸಿಕೊಳ್ಳಲಾಗಿದೆ. ಆರೋಪಿತರನ್ನು ವಿಚಾರಣೆ ಮಾಡಿದಾಗ ನಾಗರಾಜ್ ( 47) , ಶೀವಪ್ಪ ಎಂ (38), ನರಸಿಂಹಪ್ಪ (42), ವಾಸ: ಶಾಂತನಹಳ್ಳಿ ಕೂಡ್ಲೀಗಿ ತಾ. ವಿಜಯನಗರ ಜಿಲ್ಲೆ ಎಂದು ತಿಳಿಸಿದ್ದು,
ದೇವಾಸ್ಥಾನದ ಹುಂಡಿ ಹೊಡೆಯಲು ಬಂದಿರುವ ಬಗ್ಗೆ ಖಚಿತಪಡಿಸಿಕೊಂಡು ಆರೋಪಿತರನ್ನು ಮತ್ತು ದೂರುದಾಟರ ಯು.ಬಿ ಶರಣಪ್ಪ (55) ಅಣಬೂರ್ ಗ್ರಾಮ ಇವರನ್ನು ಠಾಣೆಗೆ ಕರೆತಂದು ಠಾಣೆಯ ಜಗಳೂರು ಪೊಲೀಸ್ ಠಾಣೆಯ ಪೋಲೀಸ್ ನಿರೀಕ್ಷರ ರಾಷ್ಟ್ರಪತಿ ಹೆಚ್ ಎಸ್ ಬಳಿ ಹಾಜರಪಡಿಸಿ ಪ್ರಕರಣ ದಾಖಲಿಸಲಾಗಿದೆ.
ಈ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆರೋಪಿತರು ಈ ಹಿಂದೆ ಹಲವು ದೇವಾಸ್ಥಾನಗಳ ಹುಂಡಿಗಳನ್ನು ಕಳ್ಳತನ ಮಾಡಿರುವ ಬಗ್ಗೆ ತಿಳಿದು ಬಂದಿರುತ್ತದೆ. ಆರೋಪಿತರ ವಿರುದ್ದ ಹೆಚ್ಚಿನ ವಿಚಾರಣೆ ಮುಂದುವರೆದಿರುತ್ತದೆ.
ಸಾರ್ವಜನಿಕರ ಗಮನಕ್ಕೆ: ಪೊಲೀಸ್ ಇಲಾಖೆಗೆ ಸಂಬಂಧಿಸಿದಂತೆ ಯಾವುದೇ ತುರ್ತು ಸೇವೆಗೆ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ.



