ದಾವಣಗೆರೆ: ನಗರ ಪ್ರಮುಖ ವ್ಯಾಪಾರಿ ಸ್ಥಳವಾದ ಮಂಡಿಪೇಟೆ ಎನ್.ಆರ್.ರಸ್ತೆಯ ಜುವೆಲ್ಲರ್ಸ್ ಶಾಪ್ ನಲ್ಲಿ ಕಳ್ಳತನ (Gold shop theft) ನಡೆದಿದೆ.
ರಾತ್ರಿ ವೇಳೆ ಕಳ್ಳರು ಮಂಡಿಪೇಟೆ ಎಚ್.ಕೆ.ಎ. ಜುವೆಲ್ಲರ್ಸ್ ಅಂಗಡಿಯ ಶಟರ್ ಮುರಿದು, ಒಳನುಗ್ಗಿ, ಅಂಗಡಿಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಬೆಳ್ಳಂಬೆಳಗೆ ಕಳ್ಳತನದ ವಿಷಯ ತಿಳಿಯುತ್ತಿದ್ದಂತೆ ಶಾಪ್ ಮಾಲೀಕರು ಸ್ಥಳಕ್ಕೆ ಆಗಮಿಸಿ ಬಸವ ನಗರ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಎಷ್ಟು ಚಿನ್ನಾಭರಣ ಕಳವಾಗಿದೆ ಎಂಬುದು ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.