ದಾವಣಗೆರೆ: ಯುವತಿಯನ್ನು ಪ್ರೀತಿಸುವಂತೆ ಪೀಡಿಸಿ, ಅವಾಚ್ಯವಾಗಿ ಬೈದು, ಪ್ರಾಣ ಬೆದರಿಕೆ ಹಾಕಿದ ಪ್ರಕರಣದ ಅಪರಾಧಿಗೆ 3 ತಿಂಗಳು ಕಾರಾಗೃಹ ಶಿಕ್ಷೆ ಹಾಗೂ 15 ಸಾವಿರ ರೂ ದಂಡ ವಿಧಿಸಲಾಗಿದೆ.
ಆರೋಪಿ ನವೀನ್ ಶಿಕ್ಷೆಗೆ ಒಳಗಾದವನು. ಆರೋಪಿ ಪ್ರೀತಿಸುವಂತೆ ಯುವತಿಯನ್ನು ಪೀಡಿಸುತ್ತಿದ್ದು, ನೀನು ಪ್ರೀತಿಸದೆ ಇದ್ದರೆ ಜೀವಸಹಿತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕುತ್ತಿದ್ದನು. ಯುವತಿ ವಿರೋಧಿಸಿದಾಗ ಅವಾಚ್ಯವಾಗಿ ಬೈದಾಡಿ, ತಂದೆ ಜೊತೆ ಯುವತಿ ಹೋಗುತ್ತಿದ್ದಾಗ ವಿಶಾಲ್ ಮಾರ್ಟ್ ಮುಂಭಾಗ ಬೈಕ್‌ನ್ನು ಅಡ್ಡಹಾಕಿ ಲಾಂಗ್ ಬೀಸಿದ್ದನು.
ಆರೋಪಿ ಬೀಸಿದ ಲಾಂಗ್ ನಿಂದ ಸೊಂಟದ ಬಳಿ ಸ್ವಲ್ಪ ತಾಗಿ ತರಚಿದೆ. ಆರಾಒಪಿ ನವೀನನ ಮೇಲೆ ಕಾನೂನು ಕ್ರಮ ಜರುಗಿಸಿ ಅಂತ ನೀಡಿದ ದೂರಿನ ಮೇರೆಗೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಯುವತಿವ ಪ್ರಕರಣ ದಾಖಲು ಮಾಡಿದ್ದರು.
ಸದರಿ ಪ್ರಕರಣದಲ್ಲಿ ಪಿಎಸ್‌ಐ ರೂಪ ತೆಂಬದ್, ತನಿಖೆ ಕೈಗೊಂಡಿದ್ದು ಆರೋಪಿ ಬೈಕ್ ತಡೆದು ಲಾಂಗ್‌ಬೀಸಿ ಕೈಗೆ ಮತ್ತು ಸೊಂಟಕ್ಕೆ ಸಾಮಾನ್ಯ ಸ್ವರೂಪದ ನೋವುಂಟು ಮಾಡಿರುವುದು ತನಿಖೆಯಿಂದ ದೃಢಪಟ್ಟಮೇರೆಗೆ ಆರೋಪಿತನ ವಿರುದ್ದ ಘನ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಈ ಸಂಬಂಧ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗೆ ಜ.16ರಂದು 3 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ಮತ್ತು 15,000/- ದಂಡ ವಿಧಿಸಿ ಆದೇಶಿದೆ. ಆರೋಪಿತನು ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದುದ್ದರಿಂದ ಈ ಅವಧಿಯನ್ನು ಪರಿಗಣಿಸಿ ಶಿಕ್ಷಾ ಅವಧಿಯನ್ನು ಸೆಟ್ ಆಪ್ ಮಾಡಲಾಗಿರುತ್ತದೆ ಹಾಗೂ ಸದರಿ ಆರೋಪಿತನಿಂದ ವಸೂಲುಮಾಡಿದ ದಂಡದ ಮೊತ್ತದಲ್ಲಿ 10,000/-ರೂಗಳನ್ನು ಪ್ರಕರಣದ ಸಂತ್ರಸ್ಥೆಗೆ ನೀಡುವಂತೆ ಹಾಗೂ ಉಳಿದ 5,000/-ರೂಗಳನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸಿರುತ್ತಾರೆ ಸದರಿ ಪ್ರಕರಣದ ಪರವಾಗಿ ಸರ್ಕಾರಿ ವಕೀಲ ಮಂಜುನಾಥ್ .ಬಿ ನ್ಯಾಯ ಮಂಡನೆ ಮಾಡಿದ್ದರು.



