ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ಕೊಂಡಜ್ಜಿ ಗ್ರಾಮದ ಬಾರ್ ನಲ್ಲಿ 33, 600 ಮೌಲ್ಯದ ಮದ್ಯ ಕಳ್ಳತನವಾಗಿದೆ.
ಹರಿಹರ ತಾಲ್ಲೂಕಿನ ಕೊಂಡಜ್ಜಿ ಗ್ರಾಮದ ರಾಜೇಶ್ವರಿ ಮಾಲೀಕತ್ವದ ಪೂಜಾ ವೈನ್ ಶಾಪ್ ನಲ್ಲಿ ಎಂದಿನಂತೆ ಮ್ಯಾನೇಜರ್ ಜಗನ್ನಾಥ.ಎ ರಾತ್ರಿ ವ್ಯಾಪಾರ ಮುಗಿಸಿ ಬಾಗಿಲು ಹಾಕಿಕೊಂಡು ಹೋಗಿದ್ದರು. ತಡ ರಾತ್ರಿ ಯಾರೋ 3-4 ಜನ ಕಳ್ಳರು ನಿಮ್ಮ ವೈನ್ ಶಾಪ್ ನ ಹಿಂಭಾಗದ ಗೋಡೆ ಹೊಡೆದು ಅಂಗಡಿಯಲ್ಲಿದ್ದ ಮದ್ಯದ ಬಾಕ್ಸ್ ಗಳನ್ನು ಹೊರಗಡೆ ಇಟ್ಟಿದ್ದಾರೆ ಎಂದು ಅಲ್ಲೇ ಪಕ್ಕದಲ್ಲಿ ಅಂಗಡಿ ಇಟ್ಟುಕೊಂಡಿದ್ದ ಗಿರೀಶ್ ಮಾಹಿತಿ ನೀಡಿದ್ದಾರೆ ಎಂದು ಜಗನ್ನಾಥ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವೈನ್ ಶಾಪ್ ನ ಹಿಂಭಾಗದ ಗೋಡೆಯನ್ನು ಹೊಡೆದು ಒಳ ಪ್ರವೇಶಿಸಿ ಹೈವಾರ್ಡ್ಸ್ ವಿಸ್ಕಿಯ 90 ಎಂ. ಎಲ್ ನ 10 ಮದ್ಯದ ಬಾಕ್ಸ್ ಗಳನ್ನು ತೆಗೆದುಕೊಂಡು ಹೋಗಲು ಬಾರ್ ನಿಂದ ಕಳವು ಮಾಡಿ ತೆಗೆದುಕೊಂಡು ಬಂದು ಗೋಡೆ ಪಕ್ಕದಲ್ಲಿಟ್ಟಿರುತ್ತಾರೆ. ಅಷ್ಟರಲ್ಲಿ ಗಿರೀಶ್ ರವರು ನೋಡಿ ಕೂಗಿಕೊಂಡಿದ್ದರಿಂದ ಕಳ್ಳರು ಅಲ್ಲಿಂದ ಓಡಿ ಹೋಗಿರುತ್ತಾರೆ. ಮದ್ಯದ ಬಾಕ್ಸ್ ಗಳ ಬೆಲೆ 33,600/- ರೂ. ಗಳಾಗಬಹುದು. ಆದ್ದರಿಂದ ನಮ್ಮ ಬಾರ್ ನಲ್ಲಿ ಕಳವು ಮಾಡಲು ಪ್ರಯತ್ನಿಸಿರುವ ಕಳ್ಳರನ್ನು ಪತ್ತೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.