ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಕಾನನಕಟ್ಟೆ ಟೋಲ್ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ ಅನ್ನಭಾಗ್ಯಯೋಜನೆಯ 144 ಚೀಲಗಳಿದ್ದ ಅಕ್ಕಿ ಲಾರಿಯನ್ನು ಪೊಲೀಸರು ಜಪ್ತಿ ಮಾಡಿಲಾಗಿದ್ದು, ಲಾರಿ ಚಾಲಕನ್ನು ಬಂಧಿಸುದ್ದಾರೆ.
ಜಗಳೂರು ಪೊಲೀಸ್ ಠಾಣೆಯ ಪಿಎಸ್‌ಐ ಗಾದಿಲಿಂಗಪ್ಪ ಮತ್ತು ಮಂಜುನಾಥ್ ಸ್ವಾಮಿ ನೇತೃತ್ವದ ತಂಡ ದಾಳಿ ಮಾಡಿದೆ. ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ 2,62,495 ರೂ.ಮೌಲ್ಯದ ಅಕ್ಕಿಯನ್ನು ಪೊಲೀಸರು ಜಪ್ತಿಮಾಡಿದ್ದಾರೆ. ಚಾಲಕ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಗುಡದೂರು ಗ್ರಾಮದ ವಿರೂಪಾಕ್ಷ (30) ಎಂದು ಗುರುತಿಸಲಾಗಿದೆ. ಹೆಚ್ಚಿನ ವಿಚಾರಣೆ ನಡೆಸಿದಾಗ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜೈನ್ ರೈಸ್‌ಮಿಲ್‌ಗೆ ಸಾಗಿಸಲಾಗುತ್ತಿತ್ತು ಎಂಬ ಸತ್ಯ ಬೆಳಕಿಗೆ ಬಂದಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಪೋತನಾಳು ಗ್ರಾಮ ಮಾರುತಿ ಟ್ರೇಟರ್ಸ್ ಮಾಲೀಕ ಗುರುರಾಜ ಎನ್ನುವ ವ್ಯಕ್ತಿ ಮಾನ್ವಿ ತಾಲೂಕಿನ ಸುತ್ತಮುತ್ತಲ ಗ್ರಾಮಗಳಲ್ಲಿ ಸಾರ್ವಜನಿಕರಿಂದ ಅನ್ನಭಾಗ್ಯ ಅಕ್ಕಿಯನ್ನು 8 ರಿಂದ 10 ರು ಪ್ರತಿ ಕೆಜಿಗೆ ಕೊಟ್ಟು ಖರೀದಿಸಿ ಗೋದಾಮಿನಲ್ಲಿ ಸಂಗ್ರಹಿಸುತ್ತಿದ್ದರು.
ಕಳೆದು ಒಂದು ವರ್ಷಳಿಂದಲೂ ಇದೇ ಅಕ್ರಮದಲ್ಲಿ ಚಟುವಟಿಕೆಯಲ್ಲಿ ತೊಡಗಿದ್ದರು. ಸಂಗ್ರಹಿಸಿದ ಅಕ್ಕಿಯನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜೈನ್ ರೈಸ್‌ಮಿಲ್‌ಗೆ ಸಾಗಿಸಿ ಅಲ್ಲಿಪಾಲೀಷ್ ಮಾಡಿಸಿ ಅವುಗಳನ್ನು 25ಕೆಜಿಯ ಅಕ್ಕಿ ಮೂಟೆಗಳಿಗೆ ಹಾಕಿ ಬ್ರಾಂಡ್
ಮಾಡಿ ಮಾರಾಟ ಮಾಡುತ್ತಿದ್ದರು ಎಂದು ಚಾಲಕ
ವಿರೂಪಾಕ್ಷ ಪೊಲೀಸರ ವಿಚಾರಣೆಯಲ್ಲಿ ತಿಳಿಸಿದ್ದಾನೆ.
ಪೊಲೀಸರು ಕೇಸ್ ದಾಖಲಿಸಿಕೊಂಡು ಆಹಾರ ನಿರೀಕಕ ವಸಂತಕುಮಾರ್ ಸಮ್ಮುಖದಲ್ಲಿ ಜಪ್ತಿ ಮಾಡಿದ ಅಕ್ಕಿಯನ್ನು ಜಗಳೂರು ತಾಲೂಕು ಕರ್ನಾಟಕ ಆಹಾರ ನಿಗಮದ ಸಗಟು ಮಳಿಗೆ ವ್ಯವಸ್ಥಾಪಕರ ವಶಕ್ಕೆ ನೀಡಲಾಗಿದೆ. ಲಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಠಾಣಾ ಸಿಬ್ಬಂದಿ ಬಸವರಾಜ್, ಮಾರುತಿ ಸೇರಿದಂತೆ ಅನೇಕ ಸಿಬ್ಬಂದಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಅಕ್ಕಿ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.



