ದಾವಣಗೆರೆ: ಆನ್‌ಲೈನ್ ಷೇರು ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿದ್ರೆ ಭಾರಿ ಲಾಭಾಂಶ ಬರಲಿದೆ ಎಂದು ನಂಬಿಸಿ ದಾವಣಗೆರೆಯ ಶಿಕ್ಷಣ ಸಂಸ್ಥೆ ಮುಖ್ಯಸ್ಥರಿಗೊಬ್ಬರಿಗೆ ಬರೋಬ್ಬರಿ 10.45 ಕೋಟಿಯಷ್ಟು ವಂಚನೆ ನಡೆದಿದೆ.
- ಚೇತನಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಡಾ. ವಿಜಯಲಕ್ಷ್ಮಿ ವೀರಮಾಚಿನೇನಿ ಅವರಿಗೆ 10.45 ಕೋಟಿ ವಂಚನೆ
- ಆನ್‌ಲೈನ್ ಷೇರು ಮಾರ್ಕೆಟ್‌ನಲ್ಲಿ ಭಾರಿ ಲಾಭಾಂಶ ತೋರಿಸಿ ವಂಚನೆ
- ಸರ್ಕಾರಿ ಅಧಿಕಾರಿಯೊಬ್ಬರ ಸಲಹೆ ಮೇರೆಗೆ ಬಾರಿ ಪ್ರಮಾಣದ ಹಣ ಹೂಡಿಕೆ
- ದಾವಣಗೆರೆಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಚೇತನಾ ವಿದ್ಯಾಸಂಸ್ಥೆಯ ಮುಖ್ಯಸ್ಥೆ ಡಾ. ವಿಜಯಲಕ್ಷ್ಮಿ ವೀರಮಾಚಿನೇನಿ ಹಣ ಹೂಡಿಕೆ ಮಾಡಿ, ವಂಚನೆಗೆ ಒಳಗಾದವರು. ಅಂತಾರಾಷ್ಟ್ರೀಯ ಗೋಲ್ಡ್ ಮ್ಯಾನ್ ಸ್ನಾಚ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ದೊರೆಯಲಿದೆ ಎಂದು ಜಿಲ್ಲಾ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕರು ನೀಡಿದ ಭರವಸೆ ಮೇಲೆ ಆನ್‌ಲೈನ್‌ನಲ್ಲಿ ಹಂತ ಹಂತವಾಗಿ 10,45,50,000 ರೂಪಾಯಿ ವರ್ಗಾವಣೆ ಮಾಡಿದ್ದರು.
ವಿಜಯಲಕ್ಷ್ಮಿ ಅವರಿಗೆ ದಾವಣಗೆರೆ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಡಿ. ಉಮೇಶ್ ಅಂತಾರಾಷ್ಟ್ರೀಯ ಗೋಲ್ಡ್ ಮ್ಯಾನ್ ಸ್ನಾಚ್ ಕಂಪನಿಯಲ್ಲಿ ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿದರೆ ದೊಡ್ಡ ಲಾಭ ನೀಡಲಿದೆ ಎಂದು ನಂಬಿಸಿದ್ದರು. ಈ ಮಾತು ನಂಬಿ ಹಂತ ಹಂತವಾಗಿ ಜೂ.12 ರಿಂದ ಆ.2 ರ ವರೆಗೆ 10.45 ಕೋಟಿ ರೂಪಾಯಿ ಹಣ ತೊಡಗಿಸಿದ್ದರು.
ಹೂಡಿಕೆ ಮಾಡಿರುವ ಹಣ ವಾಪಾಸ್ ಪಡೆಯಲು ಅವಕಾಶ ಇಲ್ಲ ಎಂಬುದು ಗೊತ್ತಾದ ತಕ್ಷಣ, ಇದೊಂದು ಆನ್ ಲೈನ್ ವಂಚನೆ ಪ್ರಕರಣ ಎಂಬುದು ತಿಳಿದಿದೆ. ಕೂಡಲೇ ಈ ಸಂಬಂಧ ದಾವಣಗೆರೆಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹೂಡಿದ್ದ ಹಣ 10.45 ಕೋಟಿಯಾಗಿದ್ದರೂ ಆನ್‌ಲೈನ್‌ನಲ್ಲಿ 23 ಕೋಟಿ ರೂಪಾಯಿ ಎಂದು ತೋರಿಸುತ್ತಿತ್ತು. ಹೂಡಿಕೆಯ ಜತೆಗೆ ಹೆಚ್ಚುವರಿಯಾಗಿ ಬಂದ ಹಣವನ್ನು ಸೇರಿದಂತೆ ಎಲ್ಲ ಹಣವನ್ನು ಬಿಡಿಸಿಕೊಳ್ಳಲು ಮುಂದಾ ದಾಗ ಕಂಪನಿಯವರು ಅರ್ಧಕ್ಕೆ ಹಣವನ್ನು ಡ್ರಾ ಮಾಡಿಕೊಳ್ಳಲು ಬರುವುದಿಲ್ಲ. ಮತ್ತಷ್ಟು ಹಣ ಹೂಡಿಕೆ ಮಾಡುವಂತೆ ಮನವೊಲಿಸಲು ಪ್ರಯತ್ನಿಸಿದ್ದಾರೆ. ಆಗ ವಂಚನೆ ಗೊತ್ತಾಗಿದೆ.