ದಾವಣಗೆರೆ: ಹೊಸ ಮನೆ ಕಟ್ಟುವ ಹಿನ್ನೆಲೆ ಸಿಮೆಂಟ್, ಕಬ್ಬಿಣ ಕಾಯಲು ಶೆಡ್ ನಲ್ಲಿ ಉಳಿದುಕೊಂಡಿದ್ದ ವೃದ್ಧನ ತಲೆಗೆ ಹೊಡೆದ ದುಷ್ಕರ್ಮಿಗಳು ಕೈಯಲ್ಲಿದ್ದ ಉಂಗುರ, ಬೇಬಿನಲ್ಲಿದ್ದ ಮೂರು ಸಾವಿರ ನಗದು ದೋಚಿ ಪರಾರಿಯಾದ ಘಟನೆ ನಡೆದಿದೆ.
ತಾಲ್ಲೂಕಿನ ಚಟ್ಟೋಬನಹಳ್ಳಿ ಹೊಸನಗರ ಕ್ಯಾಂಪ್ ನಿವಾಸಿ ರಂಗಸ್ವಾಮಿ (80) ಅವರು ತೋಳಹುಣಸೆ ಗ್ರಾಮದ ಪೆಟ್ರೋಲ್ ಬಂಕ್ ಪಕ್ಕ ಹೊಸ ಮನೆ ನಿರ್ಮಾಣ ಮಾಡುತ್ತಿದ್ದು, ಅದರ ಪಕ್ಕದಲ್ಲಿಯೇ ಶೆಡ್ ನಿರ್ಮಿಸಿ ರಾತ್ರಿ ಅಲ್ಲಿಯೇ ಮಲಗಿಕೊಂಡಿದ್ದರು.
ತಡ ರಾತ್ರಿ ದಾಳಿ ಮಾಡಿದ ದುಷ್ಕರ್ಮಿಗಳು ಹಲ್ಲೆ ಮಾಡಿ ಕೈಯಲ್ಲಿದ್ದ ಉಂಗುರ ಹಾಗೂ ಮೂರು ಸಾವಿರ ನಗದು ದೋಚಿಕೊಂಡು ಹೋಗಿದ್ದಾರೆ. ತಲೆಗೆ ಬಲವಾದ ಹೊಡೆತ ಬಿದ್ದ ಹಿನ್ನೆಲೆ ವೃದ್ಧ ಎಚ್ಚರ ತಪ್ಪಿದ್ದಾರೆ. ಆಗ 25 ಸಾವಿರ ಮೌಲ್ಯದ ಉಂಗುರ, ಮೂರು ಸಾವಿರ ನಗದು ಕಳ್ಳತನ ಮಾಡಿದ್ದಾರೆ. ಬೆಳಗ್ಗೆ ಎಚ್ಚರವಾದಾಗ ತಲೆಯಿಂದ ರಕ್ತ ಸೋರುತ್ತಿತ್ತು. ಕೂಡಲೇ ಅಲ್ಲಿದ್ದ ಸ್ಥಳೀಯರು ವೃದ್ಧನನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಬಗ್ಗೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.



