ದಾವಣಗೆರೆ: ಜಿಲ್ಲೆಯ ಚನ್ನಗಿರಿ ಪೊಲೀಸರು ಅಂತರ್ ಜಿಲ್ಲಾ ಬೈಕ್ ಕಳ್ಳನನ್ನು ಬಂಧಿಸಿದ್ದು, ಆರೋಪಿಯಿಂದ 4 ಲಕ್ಷ ಮೌಲ್ಯದ 08 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಈರಣ್ಣ ಆರೋಪಿಯಾಗಿದ್ದು, ದುಮ್ಮಿ ಗ್ರಾಮ ವಾಸಿಯಾಗಿದ್ದಾನೆ. ಈತ ದಾವಣಗೆರೆ, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಯಲ್ಲಿ ಬೈಕ್ ಕಳ್ಳತನ ಮಾಡಿದ್ದಾನೆ. ವಶಪಡಿಸಿಕೊಂಡ ಬೈಕ್‌ಗಳ ಬಗ್ಗೆ ಆರೋಪಿತನಿಗೆ ಕಳ್ಳತನ ಮಾಡಿದ ಸ್ಥಳಗಳ ಬಗ್ಗೆ ಮಾಹಿತಿ ಇಲ್ಲ.
ಡಿವೈಎಸ್ ಪಿ ಬಸವರಾಜ ಬಿ.ಎಸ್, ವೃತ್ತ ನಿರೀಕ್ಷಕ ಆರ್.ಆರ್ ಪಾಟೀಲ್ ಅವರ ಮುಂದಾಳತ್ವದಲ್ಲಿ, ಚನ್ನಗಿರಿ ಪೊಲೀಸ್ ಠಾಣೆಯ ಪಿ.ಎಸ್.ಐ ರವರುಗಳಾದ ಜಗದೀಶ್.ಜಿ (ಕಾನೂನು ಸುವ್ಯವಸ್ಥೆ) ಶ್ರೀಮತಿ ರೂಪ್ಲಿಬಾಯಿ.ಬಿ.ಎಸ್(ಅಪರಾಧ ವಿಭಾಗ), ಹಾಗೂ ಸಿಬ್ಬಂದಿಯವರಾದ ಶ್ರೀ ಎಸ್.ಆರ್.ರುದ್ರೇಶ್,ಸಿ.ಹೆಚ್. ಶ್ರೀ ಎಂ ರುದ್ರೇಶ್, ಶ್ರೀ ರಂಗಪ್ಪ, ಶ್ರೀ ಧರ್ಮಪ್ಪ, ಶ್ರೀ ಮಂಜುನಾಥ ಪ್ರಸಾದ್, ಶ್ರೀ ಕೊಟ್ರೇಶ್, ಶ್ರೀ ಪ್ರವೀಣ್ ಗೌಡ, ಮಹಮ್ಮದ್ ಖಾನ್ ತಂಡ ಆರೋಪಿಯನ್ನು ಬಂಧಿಸಿದೆ.
- ಬೈಕ್ ಗಳ ವಿವರ
- TVS VICTOR—Ch,NO:MD625AF1031N41038, En NO-OF1N31046305
- APPACHI—Ch,NO:MD634KE4562B80241, En NO-OE4BG2927213
- 3) PASSION PRO—Ch, NO:MBLHA10EWBHD35221, En NO:HA10EDBHD37704
- HEROHOND SPLENDER—Ch,NO:MBLHA10EYBHF53942 , En NO:HA10EFBHF47439
- HEROHONDSPLENDER—Ch NO:05M16C17508, En NO:05M15M24496
- HEROHONDSPLENDER—Ch,NO:MBLHA10EJ9HF35042, EnNO:HA10EA9HF81478
- HEROHONDA SPLENDER—Ch, NO:MBLHA10CGGHA05264, En,NO:HA10ERGHA15599
- HEROHONDSPLENDER—Ch, NO:05C16006304, En,N NO:05C15M06094
ಚನ್ನಗಿರಿ ಪೊಲೀಸರ ಕಾರ್ಯವೈಖರಿ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಐ.ಪಿ.ಎಸ್. ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್.ಎಂ, ಕೆ.ಎಸ್.ಪಿ.ಎಸ್ ರವರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.